ಮಂಗಳವಾರ, ಆಗಸ್ಟ್ 14, 2012

ಮಧ್ಯ-ಪ್ರಾಚ್ಯ: ಕ್ರೈಸ್ತರಿಗೆ ಧಕ್ಕೆಯಿಲ್ಲ !

ತ್ರಿಶ್ಶೂರ್, ಮಧ್ಯ-ಪ್ರಾಚ್ಯದಲ್ಲಿ ಕ್ರೈಸ್ತರ ಸಂಖ್ಯೆ ಕುಸಿಯುತ್ತಿರುವುದು ಮಹಾನ್ ವಿಪತ್ತು ಎಂದು ಧರ್ಮಶಾಸ್ತ್ರಜ್ಞ ಡಾ. ಹಾರ್ಮನ್ ಟ್ಯುಲೆ ಹೇಳಿದ್ದಾರೆ. ಜನಾಂಗ ವಿಕಾಸ, ಸರ್ವಾಧಿಕಾರತ್ವ ಮತ್ತು ರಾಜಕೀಯ ಅಸ್ಥಿರತೆ ಇದಕ್ಕೆ ಕಾರಣೀಭೂತವಾಗಿದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.
ಮಧ್ಯ-ಪ್ರಾಚ್ಯದಲ್ಲಿ ಜೀವಿಸುತ್ತಿರುವ ಕ್ರೈಸ್ತರಿಗೆ ಅಲ್ಲಿ ವಾಸ್ತವ್ಯ ಮುಂದುವರಿಸಲು ಆಸಕ್ತಿಯೇ ಇಲ್ಲ. ಹಾಗಂತ ಮಧ್ಯ-ಪ್ರಾಚ್ಯಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ಜನಾಂಗ ವಿಕಾಸ, ಸರ್ವಾಧಿಕಾರತ್ವ ಮತ್ತು ರಾಜಕೀಯ ಅಸ್ಥಿರತೆ ಇದಕ್ಕೆ ಕಾರಣೀಭೂತವಾಗಿದೆ ಎಂದು ಅವರು ವ್ಯಾಖ್ಯಾನಿಸಿದ್ದಾರೆ.
ಬೆಲ್ಜಿಯಂನ ಲ್ಯುವೆನ್ ಕ್ಯಾಥೊಲಿಕ್ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿರುವ ಡಾ. ಟ್ಯುಲೆ ಅವರು 'ಮಧ್ಯ-ಪ್ರಾಚ್ಯದಲ್ಲಿ ಇಸ್ಲಾಂ ಜತೆಗೆ ಕ್ರೈಸ್ತರ ಹೊಂದಾಣಿಕೆ' ಎಂಬ ವಿಷಯದ ಕುರಿತಾದ ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಅವರು ಸೋಮವಾರ ಮಾತನಾಡುತ್ತಿದ್ದರು.
ಮಧ್ಯ-ಪ್ರಾಚ್ಯದಲ್ಲಿ ವಾಸಿಸುತ್ತಿರುವ ಕ್ರೈಸ್ತರು ಗುಳೆ ಎದ್ದುಹೋಗುತ್ತಿದ್ದಾರೆ. ವಲಸೆ ಹೋಗುವುದೂ ಅವರಿಗೆ ಅನಾದಿ ಕಾಲದಿಂದಲೂ ಆಪ್ಯಾಯಮಾನವೇ. ಯುರೋಪ್ ಮತ್ತು ಅಮೆರಿಕದತ್ತ ಅವರು ಸದಾ ಮುಖ ಮಾಡಿತ್ತಾರೆ. ಏಕೆಂದರೆ ಆ ಭಾಗದಲ್ಲಿ ಅವರ ಕುಟುಂಬಸ್ಥರೋ, ಪರಿಚಯಸ್ಥರೋ ಯಾರೋ ಒಬ್ಬರು ಅಲ್ಲಿ ನೆಲೆಸಿರುತ್ತಾರೆ.
ಹಾಗಾಗಿ ಅವರು ಸುಲಭವಾಗಿ ಅಲ್ಲಿಗೆ ಸೇರಿಕೊಳ್ಳುತ್ತಾರೆ. ಆದರೆ ಮುಸ್ಲಿಮರಿಗೂ ಅಂತಹ ಆಸೆಯಿದ್ದರೂ ಅವರು ಹೊಸಬರಾಗಿರುವುದರಿಂದ ಯುರೋಪ್ ಮತ್ತು ಅಮೆರಿಕದತ್ತ ವಲಸೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಡಾ. ಟ್ಯುಲೆ ಹೇಳಿದ್ದಾರೆ.
'ಮಧ್ಯ ಪ್ರಾಚ್ಯದಲ್ಲಿ ಸಾಮಾನ್ಯವಾಗಿ ಮುಸ್ಲಿಮರು ಚರ್ಚು ಅಥವಾ ಕ್ರೈಸ್ತ-ವಿರೋಧಿಗಳಲ್ಲ. ಆದರೆ ಅಪರಾಧಿಗಳು, ಸಮಾಜಘಾತುಕ ಶಕ್ತಿಗಳು ತಮ್ಮನ್ನು ಸರಕಾರಿ ಪ್ರಾಯೋಜಕರು ಎಂದುಬಿಂಬಿಸಿಕೊಂಡು ಕೃತ್ರಿಮ ಜನಾಂಗೀಯ ಕಲಹದಲ್ಲಿ ಭಾಗಿಯಾಗುತ್ತಿವೆ. ಆದ್ದರಿಂದ ಮಧ್ಯ ಪ್ರಾಚ್ಯದಲ್ಲಿನ ಬಹುಸಂಖ್ಯಾತ ಮುಸ್ಲಿಮರು ಕ್ರೈಸ್ತ-ವಿರೋಧಿಗಳು ಎಂದು ಜರಿಯುವುದು ಸರ್ವತಾ ಸಾಧುವಲ್ಲ' ಎಂದು ವಸ್ತುಸ್ಥಿತಿಯನ್ನು ಬಿಡಿಸಿಟ್ಟರು.
ಮಧ್ಯ ಪ್ರಾಚ್ಯದಲ್ಲಿನ ಮುಸ್ಲಿಮರು ಮತ್ತು ಕ್ರೈಸ್ತರ ನಡುವೆ ಸಾಮರಸ್ಯ ಮೂಡಿಸಲು ಪೋಪ್ ಬೆನಿಡಿಕ್ಟ್ XVI ಅವರು ಮುಂದಿನ ತಿಂಗಳು ಲೆಬನಾನಿಗೆ ಭೇಟಿ ನೀಡುತ್ತಿದ್ದಾರೆ. ಮಧ್ಯ ಪ್ರಾಚ್ಯದಲ್ಲಿ ಕ್ರೈಸ್ತರು ಶಾಂತಿ-ನೆಮ್ಮದಿಯನ್ನು ಬದುಕಬಹುದು ಎಂಬುದನ್ನು ಸಾದರಪಡಿಸುವ ನಿಟ್ಟಿನಲ್ಲಿ ಪೋಪ್ ಬೆನಿಡಿಕ್ಟ್ ಭೇಟಿ ಮಹತ್ವದ ಪಾತ್ರವಹಿಸಲಿದೆ ಎಂದು ಅವರು ಆಶಿಸಿದರು.
ಆದರೆ ಈಗಾಗಲೇ ಕೆಲವರು ಹೇಳುತ್ತಿರುವಂತೆ ಮುಸ್ಲಿಮರು ಮತ್ತು ಕ್ರೈಸ್ತರ ನಡುವೆ ಅಂತಾರಾಷ್ಟ್ರೀಯ ಮಟ್ಟದಲ್ಲಿ The Crusade ಮಾದರಿಯಲ್ಲಿ ಕಲಹ ತಲೆದೋರಲಿದೆ ಎಂಬುದನ್ನು ಅವರು ಬಲವಾಗಿ ಅಲ್ಲಗಳೆದರು.

ಸೋಮವಾರ, ಜೂನ್ 25, 2012

ಪಾದ್ರಿಯಾದ ವಿಜಯ್ ಮಲ್ಯ ಪುತ್ರ!. ಕತ್ತಲಿನಿಂದ ಬೆಳಕಿನಡೆಗೆ ಸಿದ್ದಾರ್ಥ್ ಮಲ್ಯ.

ಬೆಂಗಳೂರು: ಇದನ್ನು ಭೂಮಿಯ ಮೇಲಿರುವ ಯಾರೂ ಕೂಡ ಊಹಿಸಿರಲಿಕ್ಕಿಲ್ಲ, ಕಂಪನಿ ವ್ಯವಹಾರ, ಸಿಕ್ಕಸಿಕ್ಕ ಹುಡುಗಿಯರೊಂದಿಗೆ ಪಾರ್ಟಿ ಮತ್ತು ಬಾಲಿವುಡ್ ನ ಹೆಚ್ಚಿನ ಎಲ್ಲಾ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಉದ್ಯಮಿ ವಿಜಯ್ ಮಲ್ಯರ ಪುತ್ರ ಸಿದ್ದಾರ್ಥ್ ಮಲ್ಯ ಚರ್ಚ್ ನ ಪಾದ್ರಿಯಾಗಿದ್ದಾರೆ ಆದರೆ ಇದು ನಿಜ.
ಯುಬಿ ಗ್ರೂಪ್ ನ ಆಡಳಿತ ನಿರ್ದೇಶಕರಲ್ಲಿ ಒಬ್ಬರಾಗಿರುವ ಸಿದ್ದಾರ್ಥ್ ಮಲ್ಯ ತಾನು ಯೂನಿವರ್ಸಲ್ ಲೈಫ್ ಚರ್ಚ್ ನ ಪ್ರಮಾಣಿಕೃತ ಪಾದ್ರಿಯೆಂದು ವಿಶ್ವಕ್ಕೆ ಹೇಳಿಕೊಂಡಿದ್ದಾರೆ. ಅವರು ಈಗ ಪಾದ್ರಿ ಮಾಡುವಂತಹ ಎಲ್ಲಾ ಕಾರ್ಯಗಳನ್ನು ಮಾಡಬಹುದಾಗಿದೆಯಂತೆ. ಜೂನಿಯರ್ ಮಲ್ಯ ಈ ಸ್ಫೋಟಕ ವಿಷಯವನ್ನು ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ. ಟ್ವಿಟ್ಟರ್ ನಲ್ಲಿ ಸಿದ್ದಾರ್ಥ್ ಹೀಗೆ ಬರೆದಿದ್ದಾರೆ. ನನ್ನ ಪ್ರಮಾಣಪತ್ರ ನಾನು ದೀಕ್ಷೆ ಪಡೆದಿರುವುದನ್ನು ತೋರಿಸುತ್ತದೆ. ನಾನು ಈಗ ಕಾನೂನು ಬದ್ಧವಾಗಿ ರೆವರೆಂಡ್ ಮಲ್ಯ ಎಂದು ಕರೆದುಕೊಳ್ಳಬಹುದು. ಮತ್ತಷ್ಟು ಟ್ವಿಟ್ ಮಾಡಿರುವ ಸಿದ್ದಾರ್ಥ್, ನಾನು ಇನ್ನು ಮದುವೆ, ಉತ್ತರಕ್ರಿಯೆ, ಬ್ಲೆಸ್ಸಿಂಗ್, ಉಪನ್ಯಾಸ ಮತ್ತು ಸಭೆಗಳನ್ನು ನಡೆಸಬಹುದು ಎಂದು ಬರೆದುಕೊಂಡಿದ್ದಾರೆ. ಆದರೆ ಮಲ್ಯ ಈ ರೀತಿಯ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು? ಆತ್ಮಸಾಕ್ಷಿಯ ಕರೆಯೇ? ಸಿದ್ದಾರ್ಥನೇ ಇದಕ್ಕೆ ಉತ್ತರಿಸಬೇಕು.
 

ಮಂಗಳವಾರ, ಮೇ 1, 2012

ಬಿಷಪ್ ಅಂದ್ರೆ ಹೀಗಿರಬೇಕು.


ಬಿಷಪ್ ಅಂದ್ರೆ ಹೀಗಿರಬೇಕು.  ಸಭೆಗಳ ಬಗ್ಗೆ ಅಪಾರವಾದ ಕಾಳಜಿ, ಅದರಲ್ಲೂ ಹಳ್ಳಿ ಸಭೆಗಳ ಬಗ್ಗೆ ಹೆಚ್ಚು ಕಾಳಜಿ, ಜನರೊಡನೆ ಬೆರೆತು ಸೇವೆ  ಮಾಡುವ ಅಪರೂಪದ ವ್ಯಕ್ತಿತ್ವ, ಯಾರು ಎಂಥಾ ಸಮಸ್ಯೆಗಳನು ಹೋತ್ತು ತಂದರು ಸಮಸ್ಯೆಗೆ ಸೂಕ್ತ ಪರಿಹಾರ C S I. ಮಂಗಳೂರು ಬಿಶೋಪ್ ಸದಾನಂದರವರಲ್ಲಿ. ಸಮಾದಾನದ ಅಪರೂಪದ ವ್ಯಕ್ತಿ, ಯಾವಾಗಲು ಹಸನ್ಮುಖಿ  ಸೇರಂಪುರು (ಶರಂಪುರ) ಯೂನಿವರ್ಸಿಟಿಯ ಕುಲಸಚಿವ ಪದವಿ ಇದ್ದರು ಅಹಂ ಇಲ್ಲವೇ ಇಲ್ಲ, ಮನಸಿನಲ್ಲಿ ಬರಿ ಸೇವೆ ಸೇವೆ ಸೇವೆ, ನಮ್ಗೂ C S I - k N D ಗೆ  ಇಂತಹ ಬಿಷಪ್ ರೆ   ಬೇಕಲ್ಲವೇ.
                                                                   

ಭಾನುವಾರ, ಏಪ್ರಿಲ್ 15, 2012

ಈ“ಪಾದ್ರಿಗಳಿಗೊಂದು ಸವಾಲು” ” ಇದೂ ಟೀಕೆ ಅಲ್ಲ ತಿದ್ದುವಿಕೆ “

“ಪಾದ್ರಿಗಳಿಗೊಂದು ಸವಾಲು” ” ಇದೂ ಟೀಕೆ ಅಲ್ಲ ತಿದ್ದುವಿಕೆ “  ಅಲ್ಲಾರೀ ನಿಮ್ಮ ನಾಲ್ಕು ಜನರ ಪೋಟೋ ಹಾಕಿಕೊಂಡಿದ್ದು ಓಕೆ ನೀವೆಲ್ಲಾ  ಹಾಗೆಯೇ ಇದ್ದಿರಿ ಸಭೆಯವರೀಗೂ ಗೊತ್ತು.  ಆದ್ರೆ ನಾಲ್ಕು ಜನರ ಪೋಟೋದ ಮೇಲೆ ಇನೊಂದು ಪೋಟೋ ಇದೆ ಅದು ಯಾರ  ಪೋಟೋ? ( ಚಿತ್ರ) ಅಲ್ಲಾರೀ ಪಾದ್ರಿಗಳೆ  ನಿಮ್ಮಲ್ಲೇ ಆ  ಮೂಢನಂಬಿಕೆಗಳು ಹೋಗಿಲ್ಲ ಅಂದ್ರೆ ಹೇಗೆ ? ತಿದ್ದಿ ಬುದ್ಧಿ ಹೇಳುವ  ನೀವೇ ಹಾದಿ ತಪ್ಪಿಸಿದರೆ ಸಭೆಯವರ ಗತಿಯೇನು? ಬೇಜಾರ್ ಮಾಡ್ಕೋಬೇಡಿ ಪಾದ್ರಿಗಳೆ.  BIBLE ನಲ್ಲಿ ಆ ಚಿತ್ರದ ಬಗ್ಗೆ ಯಾವ ಆಧಾರವೂ ಇಲ್ಲಾ. ಬೇಕಾದ್ರೆ ನಾನು ಸವಾಲು ಹಾಕಲು ಸಿದ್ದ. ಇದು ಚಿಕ್ಕ ಸಂಗತಿ ಅಲ್ಲ ಗಂಭೀರವಾಗಿ ತೆಗೆದುಕೊಳ್ಳಿ.
C S I - k N D ಬಿಶೋಪ್ ಪ್ಯಾನಲ್ ಚುನಾವಣೆ ಯಾರಾದ್ರು   ಬಿಶೋಪ್ ಆಗ್ರಿ , ಸೇವೆ ಮಾಡೋದು  ಮರಿಬೇಡಿ . ಈ  ಹಿಂದೆ   ಬಿಶೋಪ್ ಆಧೋರು , ಪಾದ್ರಿಗಳಾಗಿದ್ಧಾಗ  ಚೆನ್ನಾಗೆ ಇದ್ರೂ . ಬಿಶೋಪ್  ಆದ  ಮೇಲೆ ಅವರ  ನಡವಳಿಕೆಯನ್ನು ಸಭೆಯವರು ಕಂಡಿದ್ಧು ಇದೆ. ಬಿಶೋಪ್ ಆದಮೇಲೆ ಗತ್ತೇ ಬಧಲಾಗಿದ್ಧು ಕಂಡಿದ್ಧಾರೆ .ಬಿಶೋಪ್ ಆದೋರು ಬಹಳ ಶ್ರೀಮಂತಿಕೆಯನ್ನು  ಕಂಡಿದ್ಧಾರೆ . ಆಸ್ತಿ ಗೋಷಣೆ ಇಗ್ಲೆ ಮಾಡಿದರೆ ಒಳ್ಳೇದು . ಒಂದು ಸಮೀಕ್ಷೆಯ ಪ್ರಕಾರ ರೆ||ನಿರಂಜನ್  ಮತ್ತು ರೆ|| ಹುಲಗೇರಿ ಪ್ಯಾನೆಲ್ಗೆ ಬರುವ ಸಾಧ್ಯತೆ ಇದೆ .ಇಬ್ಬರು ಆಟಕ್ಕೆ  ಉಂಟು ೮ ಜನ  ಲೆಕಕ್ಕೆ   ಇಲ್ಲ .   ಪ್ಯಾನಲ್ಗೆ  ಬರುವ ಇನ್ನು ಇಬ್ಬರು ಗೊತ್ತಿಲ್ಲ !!!
.

ಗುರುವಾರ, ಮಾರ್ಚ್ 15, 2012

ಯಾವೂದೆ ಒಂದು ವ್ಯಾಯಾಮ ಯಾವೂದೆ ಒಂದು ಧರ್ಮಕ್ಕೆ ಸೀಮಿತ ಅಲ್ಲ. ಅದಕಿಂತ ಮುಕ್ಯವಾದುದು ಪ್ರಾರ್ಥನೆ ಅಂಥಾ ಎಲ್ಲರಿಗೂ ಗೊತ್ತು.



ಯಾವೂದೆ ಒಂದು ವ್ಯಾಯಾಮ ಯಾವೂದೆ ಒಂದು "ಧರ್ಮ"ಕ್ಕೆ ಸೀಮಿತ ಅಲ್ಲ. ಯೋಗ ಮಾಡಬಾರದು “ಸೂರ್ಯ ನಮಸ್ಕಾರ ಮಾಡಲೇಬಾರದು” ಅಂಥಾ ಕೆಲವು ಕ್ರಿಶ್ಚಿಯನ್ನರು ಕೆಲವು ಜನ ಪಾದ್ರಿಗಳು ಹೇಳುತಿದ್ದಾರೆ. ವ್ಯಾಯಾಮ ಮಾಡಿದ್ರೆ ಕಂಡಿತಾ ಆರೋಗ್ಯ ಲಭಿಸುತ್ತೆ ಇದು ಎಲ್ಲರಿಗೂ ತಿಳಿದ ವಿಷಯ. ಅದನ್ನ ಬಿಟ್ಟು ಈ ವ್ಯಾಯಾಮ ಬೇಡ ಆ ವ್ಯಾಯಾಮ ಬೇಡ ಅಂತ ಹೇಳೋದಾ! ಉದಾಹರಣೆಗೆ ಸೂರ್ಯ ನಮಸ್ಕಾರ ಮಾಡಬಾರದು. ಅದು ಸೂರ್ಯನಿಗೆ ನಮಸ್ಕಾರ ಮಾಡಿದಂತೆ ಅನ್ನೋ ವಾದ. ಅಲ್ಲರೀ ಪಾದ್ರಿಗಳೆ ಸೂರ್ಯ ದೇವರು ಅಂಥಾ ನೀವ್ಯಾಕೆ ತಿಳೀತಿರೀ. ಅದು ಆ ವ್ಯಾಯಾಮದ style ಅಸ್ಟೇ. ದೇಹಕ್ಕೂ ಸ್ವಲ್ಪ ವ್ಯಾಯಾಮ ಬೇಕು ಅಲ್ಲವೆ. ಅದಕಿಂತ ಮುಕ್ಯವಾದುದು ಪ್ರಾರ್ಥನೆ ಅಂಥಾ ಎಲ್ಲರಿಗೂ ಗೊತ್ತು. “ಬೇಜಾರು ಮಾಡ್ಕೋಬೇಡಿ ಅರ್ಥಮಾಡ್ಕೊಳ್ಳಿ”

ಶನಿವಾರ, ಮಾರ್ಚ್ 3, 2012

“ದೇವರ ಸೇವೆಗೆ ರಜೆ ಹಾಕಬಾರದು”



ನನ್ನ ತಂದೆ Rev. A D Doddamani. C S I ಸಭೆಗಳಲ್ಲಿ 44 ವರ್ಷಗಳ ಸುದೀರ್ಘವಾದ ಸೇವೆ ಸಲ್ಲಿಸಿದವರು. ದಿನಾಲೂ ಬಿಡುವಿಲ್ಲದೆ ದೇವರ ಸೇವೆಗೆ ಹೋಗೋರು. ಆವಾಗ ವಾಹನಗಳ ಸೌಕರ್ಯ ಅಷ್ಟಾಗಿ ಇರಲಿಲ್ಲ. ನಡೆದು ನಡೆದು ಸುಸ್ತಾಗಿ ಮನೆಗೆ ಬರೋರೂ ಊಟ ಮಾಡಿ ಮಲಗುವ ಮುನ್ನ ನನ್ನನ ಕರೆದು ತಮ್ಮ ದೇವದಾನ ಸ್ವಲ್ಪ ಕಾಲು ಒತ್ತಪ್ಪ ನೋವು ಅನ್ನೋರು. ದಿನಾಲೂ ನಾನು ನನ್ನ ತಂದೆಯವರಿಗೆ ಮಸಾಜ್ ಮಾಡೋದು. ಇಂಥಾ ಒಂದು ಸಂದರ್ಭದಲ್ಲಿ ನಾನು ನನ್ನ ತಂದೆಗೆ ಒಂದು ಪ್ರಶ್ನೆ ಕೇಳ್ದೆ. ಅಲ್ಲಾ ನೀವೂ ದಿನಾಲೂ ಸೇವೆಗೆ ಹೋಗಬೇಕಾ ? ಸ್ವಲ್ಪದಿನಾ ರಜೆಹಾಕಿ ಅಂದೆ. ಆ ಸಂದರ್ಭದಲ್ಲಿ ನನ್ನ ತಂದೆ ನನಗೆ ಹೇಳಿದ ಮಾತು
“ದೇವರ ಸೇವೆಗೆ ರಜೆ ಹಾಕಬಾರದು” ತಂದೆ ಹೇಳಿದ ಅನುಭವದ ಮಾತು ಸತ್ಯ ಅಲ್ಲವೆ.