ರೋಮನ್ ಕ್ಯಾಥೋಲಿಕ್
ಕ್ರೈಸ್ತರ ಧರ್ಮಗುರು ಪೋಪ್ ಬೆನೆಡಿಕ್ಟ್ XVI ಅವರ ಉತ್ತರಾಧಿಕಾರಿಯಾಗಿ ಅರ್ಜೆಂಟಿನಾದ ಜಾರ್ಗ್ ಮಾರಿಯೊ
ಬೆರ್ಗೋಗ್ಲಿಯೋ ಮಾರಿಯೊ
ಬೆರ್ಗೋಗ್ಲಿಯೋ (76) ಅವರು ಆಯ್ಕೆಯಾಗಿದ್ದಾರೆ. ವ್ಯಾಟಿಕನ್
ಕ್ರೈಸ್ತರು ಮತ್ತು ವಿಶ್ವದಾದ್ಯಂತ ಇರುವ
ರೋಮನ್ ಕ್ಯಾಥೋಲಿಕ್ ಕ್ರೈಸ್ತ ಧರ್ಮೀಯರು 266ನೇ
ಧರ್ಮಗುರುವನ್ನು ಸ್ವಾಗತಿಸಿದ್ದಾರೆ.13ನೇ ಶತಮಾನದಲ್ಲಿ ಬಡತನದಲ್ಲಿಯೇ
ಬದುಕಿದ ಇಟಲಿಯ ಧರ್ಮಗುರು ಫ್ರಾನ್ಸಿಸ್
ಅವರ ಹೆಸರನ್ನು ಜಾರ್ಗ್ ಅವರು ಇಟ್ಟುಕೊಂಡಿದ್ದಾರೆ.
ಪೋಪ್ ಫ್ರಾನ್ಸಿಸ್ ಅವರು ಮೊದಲ ಅಮೆರಿಕನ್
ರೋಮನ್ ಕ್ಯಾಥೋಲಿಕ್ ಧರ್ಮಗುರುವಾಗಿದ್ರು,
ಒಂದು ಶತಮಾನದ ಇತಿಹಾಸ ಗಮನಿಸಿದರೆ
ಯುರೋಪ್‌ನಿಂದ ಹೊರಗಿರುವ ಮೊದಲ
ಧರ್ಮಗುರು. ಸಲಿಂಗಿಗಳ ಮದುವೆ, ಗರ್ಭಪಾತ ಮತ್ತು
ಗರ್ಭನಿರೋಧಕ ಬಳಕೆಯನ್ನು ವಿರೋಧಿಸುವುದಾಗಿ ಪೋಪ್ ಫ್ರಾನ್ಸಿಸ್ ಹೇಳಿದ್ದಾರೆ.
ಸಲಿಂಗಿಗಳ ಮದುವೆ ದೈವೇಚ್ಛೆಯ ಮೇಲೆ
ನಡೆಸುವ ವಿಧ್ವಂಸಕ ಕೃತ್ಯ ಎಂದು ಅವರು
ಹೇಳಿದ್ದಾರೆ.
ಭಾನುವಾರ, ಮಾರ್ಚ್ 17, 2013
ಶನಿವಾರ, ಫೆಬ್ರವರಿ 16, 2013
ಅಲ್ಪಸಂಖ್ಯಾತರ ವಿಶ್ವವಿದ್ಯಾಲಯಕ್ಕೆ ರೆವರೆಂಡ್ ಫರ್ಡಿನ್ಯಾಂಡ್ ಕಿಟ್ಟೆಲ್ ಅವರ ಹೆಸರನ್ನಿಡಬೇಕು. 'ದೇಶದಲ್ಲಿ ಅಲ್ಪಸಂಖ್ಯಾತರೆಂದರೆ ಕೇವಲ ಮುಸ್ಲಿಮರಷ್ಟೇನಾ?
ಮಂಗಳೂರು,
ಫೆ. 16: ಶ್ರೀರಂಗಪಟ್ಟಣದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಅಲ್ಪಸಂಖ್ಯಾತರ ವಿಶ್ವವಿದ್ಯಾಲಯಕ್ಕೆ ಕನ್ನಡದ ಬಗ್ಗೆ ವಿಶೇಷ
ಒಲವನ್ನು ಹೊಂದಿದ್ದ ರೆವರೆಂಡ್ ಫರ್ಡಿನ್ಯಾಂಡ್ ಕಿಟ್ಟೆಲ್ ಅವರ ಹೆಸರನ್ನಿಡಬೇಕು ಎಂದು
ಕೆಥೋಲಿಕ್ ಕ್ರೈಸ್ತ ಪರ ಸಂಘಟನೆಗಳ
ಒತ್ತಾಯಕ್ಕೆ ಮತ್ತಷ್ಟು ಬಲ ಬಂದಿದೆ.ಅಲ್ಪಸಂಖ್ಯಾತರಿಗೆ
ಪ್ರತ್ಯೇಕ ವಿವಿಗೆ ಟಿಪ್ಪು ಸುಲ್ತಾನ್
ಹೆಸರಿಡುವುದೆಂದರೆ ಕ್ರೈಸ್ತರಿಗೆ ಗಾಯದ ಮೇಲೆ ಬರೆ
ಎಳೆದಂತೇ ಸರಿ ಎಂದು ಮಂಗಳೂರಿನಲ್ಲಿ
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾಮಾಜಿಕ ಹೋರಾಟಗಾರ ಟಿಜೆ
ಅಬ್ರಹಾಂ ಅವರು ವ್ಯಾಖ್ಯಾನಿಸಿದ್ದಾರೆ'ಶಿಕ್ಷಣ
ಕ್ಷೇತ್ರಕ್ಕೆ ಕ್ರೈಸ್ತರ ಕೊಡುಗೆ ಅಪಾರ. ಕ್ರೈಸ್ತರನ್ನು
ವಿರೋಧಿಸುವವರೂ ಇದನ್ನು ಒಪ್ಪುತ್ತಾರೆ. ಆದರೆ,
ಅಲ್ಪಸಂಖ್ಯಾತರ ವಿವಿ ಸ್ಥಾಪನೆ ವಿಷಯ
ಬಂದಾಗ ಕೇಂದ್ರ ಸರಕಾರ ಸೌಜನ್ಯಕ್ಕಾದರೂ
ಕ್ರೈಸ್ತರನ್ನು ಪರಿಗಣಿಸದಿರುವುದು ಖಂಡನೀಯ' ಎಂದು ಅವರು
ಅಸಮಾಧಾನ ವ್ಯಕ್ತಪಡಿಸಿದ್ದಾರೆ.'ಕೇಂದ್ರ ಸರಕಾರ ಅಲ್ಪಸಂಖ್ಯಾತರಿಗಾಗಿ
ಪ್ರತ್ಯೇಕ ವಿವಿ ಸ್ಥಾಪನೆಗೆ ಮುಂದಾಗಿರುವುದು
ಸ್ವಾಗತಾರ್ಹ. ಆದರೆ ಟಿಪ್ಪು ಸುಲ್ತಾನ್
ಹೆಸರಿಡುವುದು ಸರಿಯಲ್ಲ' ಎಂದು ಮತ್ತೊಮ್ಮೆ ಅವರು
ಪ್ರತಿಪಾದಿಸಿದ್ದಾರೆ.'ದೇಶದಲ್ಲಿ ಅಲ್ಪಸಂಖ್ಯಾತರೆಂದರೆ ಕೇವಲ ಮುಸ್ಲಿಮರಷ್ಟೇನಾ? ಬರೀ
ಮತ ಬ್ಯಾಂಕ್ ರಾಜಕಾರಣ ಇವರದು.
ಅದೇ ಟಿಪ್ಪು ಬದಲು ಮಾಜಿ
ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ
ಹೆಸರನ್ನಿಡಲು ಕೇಂದ್ರ ಸರಕಾರ ಸಮಾಲೋಚಿಸಿದ್ದರೆ
ನಾವೇ ಅಲ್ಲ, ಹಿಂದೂಗಳೂ ವಿರೋಧ
ವ್ಯಕ್ತಪಡಿಸುತ್ತಿರಲಿಲ್ಲ' ಎಂದು ಅಭಿಪ್ರಾಯಪಟ್ಟಿದ್ದಾರೆ.'ಶ್ರೀರಂಗಪಟ್ಟಣ ಕ್ರೈಸ್ತರಿಗೆ
ಅವಮಾನದ ಸ್ಥಳ. ಟಿಪ್ಪು ಸುಲ್ತಾನ್
ತನ್ನ ಆಳ್ವಿಕೆ ಅವಧಿಯಲ್ಲಿ ಕರಾವಳಿ
ಪ್ರದೇಶದಲ್ಲಿದ್ದ ಕ್ರೈಸ್ತರನ್ನು ಸೆರೆ ಹಿಡಿದು ಶ್ರೀರಂಗಪಟ್ಟಣಕ್ಕೆ
ಕರೆ ತರುತ್ತಿದ್ದ. ಬಳಿಕ ಅವರನ್ನು ಇಸ್ಲಾಂ
ಧರ್ಮಕ್ಕೆ ಮತಾಂತರ ಮಾಡುತ್ತಿದ್ದ ಎಂದು
ಸ್ವತಃ ಟಿಪ್ಪುವಿನ ಪುತ್ರ ಗುಲಾಂ ಮೊಹಮ್ಮದ್
ತನ್ನ ಕೃತಿಯಲ್ಲಿ ಬಹಿರಂಗಪಡಿಸಿದ್ದಾನೆ. ಹಾಗಾಗಿ ಶ್ರೀರಂಗಪಟ್ಟಣ ಕ್ರೈಸರಿಗೆ
ನೋವು ತರುವ ಸ್ಥಳ. ಕ್ರೈಸ್ತರನ್ನು
ಅವಮಾನಿಸಿ, ಮತಾಂತರಗೊಳಿಸಿದ ಸ್ಥಳದಲ್ಲಿ ಸ್ಥಾಪನೆಯಾಗುವ ವಿವಿಗೆ ಟಿಪ್ಪು ಸುಲ್ತಾನ್
ಹೆಸರಿಡಲು ಅವಕಾಶ ನೀಡುವುದಿಲ್ಲ' ಎಂದು
ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.'ಟಿಪ್ಪು
ಸುಲ್ತಾನ್ ಮಹಾನ್ ಹೋರಾಟಗಾರನಿರಬಹುದು. ಆದರೆ,
ಶಿಕ್ಷಣ ಕ್ಷೇತ್ರಕ್ಕೆ ಯಾವುದೇ ಕೊಡುಗೆ ನೀಡಿಲ್ಲ.
ತಾನು ಜಯಿಸಿದ ಪ್ರದೇಶಗಳ ಹೆಸರನ್ನೂ
ಬದಲಾಯಿಸಿದ್ದ. ಮೈಸೂರಿಗೆ ನಜರಾಬಾದ್ ಎಂಬ ಹೆಸರಿಟ್ಟಿದ್ದ. ಹಾಗೆಯೇ,
ಹಲವು ಪ್ರದೇಶಗಳ ಹೆಸರು ಬದಲಿಸಿದ್ದ' ಎಂದು
ಅವರು ಹೇಳಿದ್ದಾರೆ. 'ಕನ್ನಡಕ್ಕೆ ಪ್ರಥಮ ಇಂಗ್ಲಿಷ್- ಕನ್ನಡ
ನಿಘಂಟು ನೀಡಿದ ಗೌರವಾನ್ವಿತ ಫರ್ಡಿನ್ಯಾಂಡ್
ಕಿಟ್ಟೆಲ್ ಅವರು ಭಾಷೆಗೆ ನೀಡಿದ
ಕೊಡುಗೆ ಪ್ರಶ್ನಾತೀತ. ಹಾಗಾಗಿ ಉದ್ದೇಶಿತ ವಿವಿಗೆ
ಕಿಟ್ಟೆಲ್ ಅವರ ಹೆಸರಿಡಬೇಕು. ಈ
ಕುರಿತು ಶನಿವಾರ ರಾಜ್ಯಪಾಲರಿಗೆ ಮನವಿ
ಸಲ್ಲಿಸಲಾಗುವುದು' ಎಂದು ಅವರು ತಿಳಿಸಿದ್ದಾರೆ.
'ವಿವಿಗೆ ಟಿಪ್ಪು ಸುಲ್ತಾನ್ ಹೆಸರಿಡುವ
ಪ್ರಸ್ತಾವದ ಹಿಂದೆ ರಾಜಕೀಯ ದುರುದ್ದೇಶವಿದೆ.
ವೋಟ್ ಬ್ಯಾಂಕ್ ಉದ್ದೇಶದಿಂದ ಕೇಂದ್ರ
ಈ ಪ್ರಯತ್ನಕ್ಕೆ ಮುಂದಾಗಿದ್ದು,
ಇದಕ್ಕೆ ಆಸ್ಪದ ನೀಡುವುದಿಲ್ಲ' ಎಂದು
ಎಚ್ಚರಿಸಿದ್ದಾರೆ.
ಸೋಮವಾರ, ಫೆಬ್ರವರಿ 11, 2013
ರಾಜೀನಾಮೆ ಪ್ರಕಟಿಸಿದ ಕ್ಯಾಥೊಲಿಕ್ ಕ್ರೈಸ್ತರ ಪರಮಗುರು ಪೋಪ್,
ಮ್, ಫೆ.11: ಕ್ಯಾಥೊಲಿಕ್ ಕ್ರೈಸ್ತರ
ಪರಮಗುರು ಪೋಪ್ ಬೆನೆಡಿಟ್ಕ್ XVI ಅವರು
ಫೆಬ್ರವರಿ ತಿಂಗಳ ಅಂತ್ಯಕ್ಕೆ ತನ್ನ
ಹುದ್ದೆ ತ್ಯಜಿಸಲಿದ್ದಾರೆ ಎಂದು ರೋಮ್ ನ
ಪೋಪ್ ಕಚೇರಿ ಸೋಮವಾರ(ಫೆ.11)
ಪ್ರಕಟಿಸಿದೆ. ಪೋಪ್ ಹುದ್ದೆ ತ್ಯಜಿಸುವ
ಬಗ್ಗೆ ಸ್ವತಃ ಪೋಪ್ ಬೆನೆಡಿಕ್ಟ್
ಅವರು ಘೋಷಣಾ ಪತ್ರ ಹೊರಡಿಸಿದ್ದಾರೆ.
ಅನಾರೋಗ್ಯದ ಕಾರಣ ಹುದ್ದೆಯಲ್ಲಿ ಮುಂದುವರೆಯಲು
ಸಾಧ್ಯವಾಗುತ್ತಿಲ್ಲ ಎಂದು ಪೋಪ್ ಹೇಳಿದ್ದಾರೆ. ಹೊಸ ಪೋಪ್ ಹುಡುಕಾಟದಲ್ಲಿ
ತೊಡಗಿರುವ ವ್ಯಾಟಿಕನ್ ಸಿಟಿ, ಆದಷ್ಟು ಬೇಗ
ಹೊಸ ಪೋಪ್ ಆಯ್ಕೆ ಮಾಡಲಾಗುವುದು
ಎಂದಿದೆ. ಬವಾರಿಯಾ ಮೂಲದ ಕಾರ್ಡಿನಲ್
ಜೋಸೆಫ್ ಅಲೋಸಿಯಸ್ ರಾಜ್ನಿಗರ್ ಅವರು 2005, ಏಪ್ರಿಲ್ 19 ರಂದು ಪೋಪ್ ಹುದ್ದೆಗೇರಿದ್ದರು. ಪೋಪ್ ನೀಡಿರುವ ಪ್ರಕಟನೆಯ
ಪೂರ್ಣ ಪಾಠ ಇಲ್ಲಿದೆ ಹಾಗೂ
ಆಡಿಯೋ ರೇಡಿಯೋ ವ್ಯಾಟಿಕನ್ ನಲ್ಲಿ
ಲಭ್ಯವಿದೆ.. ಆಸಕ್ತರು ಕೇಳಿ, ಪೋಪ್ ವಿವಾದಗಳ ಹಿನ್ನೋಟ: ಕೃತಕ ಗರ್ಭಧಾರಣೆಗೆ ಪೋಪ್ ರೆಡ್ ಸಿಗ್ನಲ್:
ಕೃತಕ ಗರ್ಭಧಾರಣೆ ಮೂಲಕ ಹಣ ಮಾಡುವ ಪ್ರವೃತ್ತಿಯನ್ನು ಕೈ ಬಿಡಬೇಕು. ಇದರಿಂದ ಸಿಗುವ ಸುಲಭದ ಗಳಿಕೆ
ಪಾಪದ ಸಾಲಿಗೆ ಸೇರುತ್ತದೆ ಎಂದು ಪೋಪ್ ಹೇಳಿದ್ದರು. ರೋಮ್ ನ
ಚರ್ಚ್ ನ ಸಿಬ್ಬಂದಿಗಳು ವೀರ್ಯದಾನ
ಮಾಡುವುದನ್ನು ನಿಷೇಧಿಸಲಾಗಿತ್ತು. ಆದರೆ, ಬಂಜೆತನ ಹೋಗಲಾಡಿಸಲು
ನಡೆಯುತ್ತಿರುವ ಸಂಶೋಧನೆಗೆ ವ್ಯಾಟಿಕಾನ್ ಚರ್ಚ್ ಬೆಂಬಲ ವ್ಯಕ್ತಪಡಿಸಿದ್ದು
ವಿರೋಧಾಭಾಸವಾಗಿತ್ತು. ಕ್ಯಾಥೊಲಿಕ್ ಕ್ರೈಸ್ತರ ಪರಮ
ಗುರು ಪೋಪ್ ಬೆನೆಡಿಕ್ಟ್ XVI ಹಾಗೂ
ಈಜಿಪ್ಟಿನ ಇಮಾಮ್ ತುಟಿಗೆ ತುಟಿ
ಒತ್ತಿರುವ ಚಿತ್ರವನ್ನು ಬೆನೆಟ್ಟನ್ ಸಂಸ್ಥೆ ದುರ್ಬಳಕೆ ಮಾಡಿಕೊಂಡಿದ್ದು
ದೊಡ್ಡ ಸುದ್ದಿಯಾಗಿತ್ತು. 2009ರಲ್ಲಿ ಆಫ್ರಿಕಾ ಭೇಟಿ
ವೇಳೆ, ಏಡ್ಸ್ ಸಮಸ್ಯೆಗೆ ಕಾಂಡೊಮ್
ಪರಿಹಾರವಲ್ಲ. ಆದರೆ ಅದು ಪ್ರತಿಕೂಲ
ಸ್ಥಿತಿಯನ್ನು ಹೆಚ್ಚಿಸುತ್ತದೆ ಎಂಬ ಬೆನೆಡಿಕ್ಟ್ ಹೇಳಿಕೆಗೆ
ಯೂರೋಪಿಯನ್ ದೇಶಗಳು ಸೇರಿದಂತೆ ಅನೇಕ
ಅಂತಾರಾಷ್ಟ್ರೀಯ ಸಂಘಟನೆಗಳು ಹಾಗೂ ವಿಜ್ಞಾನಿಗಳಿಂದ ತೀವ್ರ
ವಿರೋಧ ವ್ಯಕ್ತಗೊಂಡಿತ್ತು. ಅಮೆರಿಕದ ಕ್ಯಾಥೊಲಿಕ್ ಮಹಿಳಾ ಪಾದ್ರಿಯೊಬ್ಬರು ಬರೆದಿರುವ
ಈ ಪುಸ್ತಕವು ಹಸ್ತಮೈಥುನ,
ಸಲಿಂಗಕಾಮ ಮತ್ತು ವಿಚ್ಛೇಧನದಂತಹ ವಿಷಯದ
ಬಗ್ಗೆ ಪೋಪ್ ಕಿಡಿಕಾರಿದ್ದರು.
ಶುಕ್ರವಾರ, ಡಿಸೆಂಬರ್ 21, 2012
ಹೊಸ ಟಿವಿ ಚಾನಲ್ ಯೇಸುಕ್ರಿಸ್ತನ ಬೋಧನೆ ಆಧಾರಿತ ವಾಹಿನಿ
ಡಿ 21
: ಡಿವೈನ್ ವರ್ಡ್ ಎನ್ನುವ ಹೆಸರಿನಲ್ಲಿ
ಹೊಸ ಟಿವಿ ಚಾನಲ್ ಡಿಸೆಂಬರ್
22ರಿಂದ ಆರಂಭಗೊಳ್ಳಲಿದೆ. ಕನ್ನಡ, ಕೊಂಕಣಿ ಮತ್ತು
ಇಂಗ್ಲಿಷ್ ಭಾಷೆಗಳಲ್ಲಿ ಯೇಸುಕ್ರಿಸ್ತನ ಬೋಧನೆ ಆಧಾರಿತ ಕಾರ್ಯಕ್ರಮಗಳನ್ನು
ವಾಹಿನಿ ಪ್ರಸಾರ ಮಾಡಲಿದೆ.
ಡಿವೈನ್ ವರ್ಡ್ ಚಾರಿಟಬಲ್ ಟ್ರಸ್ಟ್ ಮಾಲಕತ್ವದಲ್ಲಿ ಈ
ವಾಹಿನಿ ಕಾರ್ಯನಿರ್ವಹಿಸಲಿದ್ದು.. ವೆಸ್ಟರ್ನ್ ಇನ್ಸ್ಟಿಟ್ಯೂಟ್ ಅಧ್ಯಕ್ಷ ಸ್ಟೀಫನ್ ಮೆಂಡಿಸ್
ವಾಹಿನಿಯ ಜವಾಬ್ದಾರಿ ನಿರ್ವಹಿಸಲಿದ್ದಾರೆ. ವಾಹಿನಿಯು ಶಿಕ್ಷಣ, ಆರೋಗ್ಯ ಮುಂತಾದ
ಸಮಾಜಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿದೆ ಎನ್ನಲಾಗಿದೆ. ಟಿವಿ ಕೇಬಲ್ ಮೂಲಕವಲ್ಲದೆ
ಅಂತರ್ಜಾಲದ ಮೂಲಕ ವಾಹಿನಿಯ ಕಾರ್ಯಕ್ರಮಗಳನ್ನು
ವಿಶ್ವದಾದ್ಯಂತ ವೀಕ್ಷಿಸಬಹುದು. ರಾಜ್ಯ ಕ್ಯಾಥೋಲಿಕರ ಮೊದಲ
ಚಾನಲ್ ಇದಾಗಿದ್ದು ಹೊಸ ಹೊಸ ಸಮಾಜಮುಖಿ
ಕಾರ್ಯಕ್ರಮಗಳನ್ನು ತರಲಿದೆ ಎಂದು ಸ್ಟೀಫನ್
ಮೆಂಡಿಸ್ ತಿಳಿಸಿದ್ದಾರೆ. ಇಂಟರ್ನೆಟ್ ನಲ್ಲಿ ಈ ಕೊಂಡಿಯ
ಮೂಲಕ ವಾಹಿನಿಯ ಕಾರ್ಯಕ್ರಮ ವೀಕ್ಷಿಸಬಹುದು
ಬುಧವಾರ, ನವೆಂಬರ್ 14, 2012
ಮಿಶನರಿ ಸೇವೆ - ತಾಂಜಾನಿಯಾಕ್ಕೆ ಮಂಗಳೂರಿನ ಧರ್ಮಗುರುಗಳು.
ತಾಂಜಾನಿಯಾಕ್ಕೆ
ಮಂಗಳೂರಿನ ಧರ್ಮಗುರುಗಳು - ಆಫ್ರಿಕಾದ ತಾಂಜಾನಿಯಾದಲ್ಲಿ ಧಾರ್ಮಿಕ
ಸೇವೆಯ ಕೈಂಕರ್ಯವನ್ನು ಮಂಗಳೂರು ಕ್ಯಾಥೊಲಿಕ್ ಧರ್ಮ ಪ್ರಾಂತ್ಯ ಕೈಗೆತ್ತಿಕೊಂಡಿದ್ದು, ಈ ಹಿನ್ನೆಲೆಯಲ್ಲಿ
ಮೊದಲ ತಂಡದ ಇಬ್ಬರು ಧರ್ಮಗುರುಗಳು ಬುಧವಾರ ತಾಂಜಾನಿಯಾಕ್ಕೆ ಪ್ರಯಾಣ ಬೆಳೆಸಿದರು. ಭಾರತದ ಮಾಜಿ ರಾಷ್ಟ್ರೀಯ
ಕ್ಯಾಥೊಲಿಕ್ ಯುವಜನ ನಿರ್ದೇಶಕ ಫಾ| ಆಲ್ವಿನ್ ಡಿ'ಸೋಜಾ ಮತ್ತು ಮಡಂತ್ಯಾರ್ ಚರ್ಚ್ನ ಸಹಾಯಕ ಗುರು
ಫಾ| ರೊನಾಲ್ಡ್ ಪಿಂಟೊ ಅವರು ತಾಂಜಾನಿಯಾಕ್ಕೆ ತೆರಳಿದವರು.
ಭಾನುವಾರ, ಸೆಪ್ಟೆಂಬರ್ 16, 2012
ಮಂಗಳವಾರ, ಆಗಸ್ಟ್ 14, 2012
ಮಧ್ಯ-ಪ್ರಾಚ್ಯ: ಕ್ರೈಸ್ತರಿಗೆ ಧಕ್ಕೆಯಿಲ್ಲ !
ತ್ರಿಶ್ಶೂರ್, ಮಧ್ಯ-ಪ್ರಾಚ್ಯದಲ್ಲಿ ಕ್ರೈಸ್ತರ ಸಂಖ್ಯೆ ಕುಸಿಯುತ್ತಿರುವುದು ಮಹಾನ್ ವಿಪತ್ತು ಎಂದು ಧರ್ಮಶಾಸ್ತ್ರಜ್ಞ ಡಾ. ಹಾರ್ಮನ್ ಟ್ಯುಲೆ ಹೇಳಿದ್ದಾರೆ. ಜನಾಂಗ ವಿಕಾಸ, ಸರ್ವಾಧಿಕಾರತ್ವ ಮತ್ತು ರಾಜಕೀಯ ಅಸ್ಥಿರತೆ ಇದಕ್ಕೆ ಕಾರಣೀಭೂತವಾಗಿದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.
ಮಧ್ಯ-ಪ್ರಾಚ್ಯದಲ್ಲಿ ಜೀವಿಸುತ್ತಿರುವ ಕ್ರೈಸ್ತರಿಗೆ ಅಲ್ಲಿ ವಾಸ್ತವ್ಯ ಮುಂದುವರಿಸಲು ಆಸಕ್ತಿಯೇ ಇಲ್ಲ. ಹಾಗಂತ ಮಧ್ಯ-ಪ್ರಾಚ್ಯಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ಜನಾಂಗ ವಿಕಾಸ, ಸರ್ವಾಧಿಕಾರತ್ವ ಮತ್ತು ರಾಜಕೀಯ ಅಸ್ಥಿರತೆ ಇದಕ್ಕೆ ಕಾರಣೀಭೂತವಾಗಿದೆ ಎಂದು ಅವರು ವ್ಯಾಖ್ಯಾನಿಸಿದ್ದಾರೆ.
ಬೆಲ್ಜಿಯಂನ ಲ್ಯುವೆನ್ ಕ್ಯಾಥೊಲಿಕ್ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿರುವ ಡಾ. ಟ್ಯುಲೆ ಅವರು 'ಮಧ್ಯ-ಪ್ರಾಚ್ಯದಲ್ಲಿ ಇಸ್ಲಾಂ ಜತೆಗೆ ಕ್ರೈಸ್ತರ ಹೊಂದಾಣಿಕೆ' ಎಂಬ ವಿಷಯದ ಕುರಿತಾದ ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಅವರು ಸೋಮವಾರ ಮಾತನಾಡುತ್ತಿದ್ದರು.
ಮಧ್ಯ-ಪ್ರಾಚ್ಯದಲ್ಲಿ ವಾಸಿಸುತ್ತಿರುವ ಕ್ರೈಸ್ತರು ಗುಳೆ ಎದ್ದುಹೋಗುತ್ತಿದ್ದಾರೆ. ವಲಸೆ ಹೋಗುವುದೂ ಅವರಿಗೆ ಅನಾದಿ ಕಾಲದಿಂದಲೂ ಆಪ್ಯಾಯಮಾನವೇ. ಯುರೋಪ್ ಮತ್ತು ಅಮೆರಿಕದತ್ತ ಅವರು ಸದಾ ಮುಖ ಮಾಡಿತ್ತಾರೆ. ಏಕೆಂದರೆ ಆ ಭಾಗದಲ್ಲಿ ಅವರ ಕುಟುಂಬಸ್ಥರೋ, ಪರಿಚಯಸ್ಥರೋ ಯಾರೋ ಒಬ್ಬರು ಅಲ್ಲಿ ನೆಲೆಸಿರುತ್ತಾರೆ.
ಹಾಗಾಗಿ ಅವರು ಸುಲಭವಾಗಿ ಅಲ್ಲಿಗೆ ಸೇರಿಕೊಳ್ಳುತ್ತಾರೆ. ಆದರೆ ಮುಸ್ಲಿಮರಿಗೂ ಅಂತಹ ಆಸೆಯಿದ್ದರೂ ಅವರು ಹೊಸಬರಾಗಿರುವುದರಿಂದ ಯುರೋಪ್ ಮತ್ತು ಅಮೆರಿಕದತ್ತ ವಲಸೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಡಾ. ಟ್ಯುಲೆ ಹೇಳಿದ್ದಾರೆ.
'ಮಧ್ಯ ಪ್ರಾಚ್ಯದಲ್ಲಿ ಸಾಮಾನ್ಯವಾಗಿ ಮುಸ್ಲಿಮರು ಚರ್ಚು ಅಥವಾ ಕ್ರೈಸ್ತ-ವಿರೋಧಿಗಳಲ್ಲ. ಆದರೆ ಅಪರಾಧಿಗಳು, ಸಮಾಜಘಾತುಕ ಶಕ್ತಿಗಳು ತಮ್ಮನ್ನು ಸರಕಾರಿ ಪ್ರಾಯೋಜಕರು ಎಂದುಬಿಂಬಿಸಿಕೊಂಡು ಕೃತ್ರಿಮ ಜನಾಂಗೀಯ ಕಲಹದಲ್ಲಿ ಭಾಗಿಯಾಗುತ್ತಿವೆ. ಆದ್ದರಿಂದ ಮಧ್ಯ ಪ್ರಾಚ್ಯದಲ್ಲಿನ ಬಹುಸಂಖ್ಯಾತ ಮುಸ್ಲಿಮರು ಕ್ರೈಸ್ತ-ವಿರೋಧಿಗಳು ಎಂದು ಜರಿಯುವುದು ಸರ್ವತಾ ಸಾಧುವಲ್ಲ' ಎಂದು ವಸ್ತುಸ್ಥಿತಿಯನ್ನು ಬಿಡಿಸಿಟ್ಟರು.
ಮಧ್ಯ ಪ್ರಾಚ್ಯದಲ್ಲಿನ ಮುಸ್ಲಿಮರು ಮತ್ತು ಕ್ರೈಸ್ತರ ನಡುವೆ ಸಾಮರಸ್ಯ ಮೂಡಿಸಲು ಪೋಪ್ ಬೆನಿಡಿಕ್ಟ್ XVI ಅವರು ಮುಂದಿನ ತಿಂಗಳು ಲೆಬನಾನಿಗೆ ಭೇಟಿ ನೀಡುತ್ತಿದ್ದಾರೆ. ಮಧ್ಯ ಪ್ರಾಚ್ಯದಲ್ಲಿ ಕ್ರೈಸ್ತರು ಶಾಂತಿ-ನೆಮ್ಮದಿಯನ್ನು ಬದುಕಬಹುದು ಎಂಬುದನ್ನು ಸಾದರಪಡಿಸುವ ನಿಟ್ಟಿನಲ್ಲಿ ಪೋಪ್ ಬೆನಿಡಿಕ್ಟ್ ಭೇಟಿ ಮಹತ್ವದ ಪಾತ್ರವಹಿಸಲಿದೆ ಎಂದು ಅವರು ಆಶಿಸಿದರು.
ಆದರೆ ಈಗಾಗಲೇ ಕೆಲವರು ಹೇಳುತ್ತಿರುವಂತೆ ಮುಸ್ಲಿಮರು ಮತ್ತು ಕ್ರೈಸ್ತರ ನಡುವೆ ಅಂತಾರಾಷ್ಟ್ರೀಯ ಮಟ್ಟದಲ್ಲಿ The Crusade ಮಾದರಿಯಲ್ಲಿ ಕಲಹ ತಲೆದೋರಲಿದೆ ಎಂಬುದನ್ನು ಅವರು ಬಲವಾಗಿ ಅಲ್ಲಗಳೆದರು.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)






