ಪುರಾತನ
ಚರ್ಚ್ಗಳಲ್ಲಿ ಒಂದಾದ ಬಾಸೆಲ್
ಮಿಷನ್ ಚರ್ಚ್ ಧಾರವಾಡದ ರೈಲ್ವೆ
ನಿಲ್ದಾಣಕ್ಕೆ ಹೋಗುವ ಮಾರ್ಗದಲ್ಲಿದ್ದು
ನೋಡಲೇ ಬೇಕಾದ ತಾಣ. ಪುರಾತನ
ಚರ್ಚ್ಗಳಲ್ಲಿ ಒಂದಾದ ಬಾಸೆಲ್ ಮಿಷನ್
ಚರ್ಚ್ ಧಾರವಾಡದ ರೈಲ್ವೆ ನಿಲ್ದಾಣಕ್ಕೆ
ಹೋಗುವ ಮಾರ್ಗದಲ್ಲಿ ಬಾಸೆಲ್ ಮಿಷನ್ ಆವರಣಕ್ಕೆ
ಹೊಂದಿಕೊಂಡಂತೆ ಇದೆ. ಬಾಸೆಲ್ ಮಿಷನರಿ
ಸೊಸೈಟಿ 1844-45ರಲ್ಲಿ ಈ ಚರ್ಚ್
ನಿರ್ಮಿಸಿತ್ತು. ಸುಮಾರು 76 ಅಡಿ ಉದ್ದ , 42 ಅಡಿ
ಅಗಲ ಹಾಗೂ ಕೋನಾಕಾರದ 24 ಅಡಿ
ಎತ್ತರವಾಗಿ ಈ ಚರ್ಚ್ ಮನಮೋಹಕವಾಗಿ
ಕಂಗೊಳಿಸುತ್ತಿದೆಯಲ್ಲದೆ, ಕ್ರಿಶ್ಚಿಯನ್ನರ ಸಾಕ್ಷಿ ಕೇಂದ್ರವಾಗಿದೆ. ಅದೇ
ರೀತಿ ಧಾರವಾಡ-ಹಳಿಯಾಳ ರಸ್ತೆಯಲ್ಲಿ
ಬರುವ "ಆಲ್ ಸೇಂಟ್ಸ್ ಚರ್ಚ್'
ಹಳೆಯ ಚರ್ಚ್ಗಳಲ್ಲಿ ಒಂದಾಗಿದೆ. 1888ರಲ್ಲಿ ಸುಮಾರು ಎರಡು
ಎಕರೆ ಪ್ರದೇಶಗಳಲ್ಲಿ ಈ ಚರ್ಚ್ನ್ನು ನಿರ್ಮಿಸಲಾಗಿದೆ.
ಶುಕ್ರವಾರ, ಜುಲೈ 26, 2013
ಸೋಮವಾರ, ಜುಲೈ 22, 2013
ಮೋದಿ ಪ್ರಧಾನಿಯಾಗುವುದು ಸೇನ್ಗೆ!(ನೋಬೆಲ್ ಪ್ರಶಸ್ತಿ ವಿಜೇತ) ಬೇಕಾಗಿಲ್ವಂತೆ. ಅವರು ದೇಶದ ಅಲ್ಪಸಂಖ್ಯಾತರ ಸುಭದ್ರತೆಗಾಗಿ ಹೆಚ್ಚಿಗೆ ಏನನ್ನೂ ಮಾಡಿಲ್ಲ".
ಮೋದಿ ಪ್ರಧಾನಿಯಾಗುವುದು ಸೇನ್ಗೆ ಬೇಕಾಗಿಲ್ವಂತೆ! ಗುಜರಾತ್ ಮುಖ್ಯಮಂತ್ರಿ ಮತ್ತು ಬಿಜೆಪಿಯ ಚುನಾವಣಾ ಸಮಿತಿಯ ಅಧ್ಯಕ್ಷ ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗುವುದನ್ನು ತಾವು ಬಯಸುವುದಿಲ್ಲ ಎಂದು ನೋಬೆಲ್ ಪ್ರಶಸ್ತಿ ವಿಜೇತ ಖ್ಯಾತ ಅರ್ಥಶಾಸ್ತ್ರಜ್ಞ ಅಮಾರ್ತ್ಯ ಸೇನ್ ಅವರು ಸ್ಪಷ್ಟ ನುಡಿಗಳಲ್ಲಿ ಹೇಳಿದ್ದಾರೆ.ಸೋಮವಾರ ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ, "ಒಬ್ಬ ಭಾರತೀಯನಾಗಿ ನನಗೆ ನರೇಂದ್ರ ಮೋದಿ ಭಾರತದ ಪ್ರಧಾನಿಯಾಗುವುದು ಬೇಕಾಗಿಲ್ಲ. ಅವರು ದೇಶದ ಅಲ್ಪಸಂಖ್ಯಾತರ ಸುಭದ್ರತೆಗಾಗಿ ಹೆಚ್ಚಿಗೆ ಏನನ್ನೂ ಮಾಡಿಲ್ಲ" ಎಂದು ಅಮಾರ್ತ್ಯ ಸೇನ್ ನುಡಿದಿದ್ದಾರೆ."ಅಲ್ಪಸಂಖ್ಯಾತರ ಭದ್ರತೆಗೆ ಸಂಬಂಧಿಸಿದಂತೆ ಮೋದಿ ಅವರ ರೆಕಾರ್ಡ್ ಅಷ್ಟು ಚೆನ್ನಾಗಿಲ್ಲ. ಅಲ್ಪಸಂಖ್ಯಾತರು ಮತ್ತೆ ದೇಶದಲ್ಲಿ ಅಭದ್ರತೆ ಅನುಭವಿಸುವುದು ಬೇಕಾಗಿಲ್ಲ .ಮಂಗಳವಾರ, ಏಪ್ರಿಲ್ 9, 2013
ಭಾನುವಾರ, ಮಾರ್ಚ್ 17, 2013
ರೋಮನ್ ಕ್ಯಾಥೋಲಿಕ್ ಕ್ರೈಸ್ತರ ಧರ್ಮಗುರು ಪೋಪ್ .
ರೋಮನ್ ಕ್ಯಾಥೋಲಿಕ್
ಕ್ರೈಸ್ತರ ಧರ್ಮಗುರು ಪೋಪ್ ಬೆನೆಡಿಕ್ಟ್ XVI ಅವರ ಉತ್ತರಾಧಿಕಾರಿಯಾಗಿ ಅರ್ಜೆಂಟಿನಾದ ಜಾರ್ಗ್ ಮಾರಿಯೊ
ಬೆರ್ಗೋಗ್ಲಿಯೋ ಮಾರಿಯೊ
ಬೆರ್ಗೋಗ್ಲಿಯೋ (76) ಅವರು ಆಯ್ಕೆಯಾಗಿದ್ದಾರೆ. ವ್ಯಾಟಿಕನ್
ಕ್ರೈಸ್ತರು ಮತ್ತು ವಿಶ್ವದಾದ್ಯಂತ ಇರುವ
ರೋಮನ್ ಕ್ಯಾಥೋಲಿಕ್ ಕ್ರೈಸ್ತ ಧರ್ಮೀಯರು 266ನೇ
ಧರ್ಮಗುರುವನ್ನು ಸ್ವಾಗತಿಸಿದ್ದಾರೆ.13ನೇ ಶತಮಾನದಲ್ಲಿ ಬಡತನದಲ್ಲಿಯೇ
ಬದುಕಿದ ಇಟಲಿಯ ಧರ್ಮಗುರು ಫ್ರಾನ್ಸಿಸ್
ಅವರ ಹೆಸರನ್ನು ಜಾರ್ಗ್ ಅವರು ಇಟ್ಟುಕೊಂಡಿದ್ದಾರೆ.
ಪೋಪ್ ಫ್ರಾನ್ಸಿಸ್ ಅವರು ಮೊದಲ ಅಮೆರಿಕನ್
ರೋಮನ್ ಕ್ಯಾಥೋಲಿಕ್ ಧರ್ಮಗುರುವಾಗಿದ್ರು,
ಒಂದು ಶತಮಾನದ ಇತಿಹಾಸ ಗಮನಿಸಿದರೆ
ಯುರೋಪ್ನಿಂದ ಹೊರಗಿರುವ ಮೊದಲ
ಧರ್ಮಗುರು. ಸಲಿಂಗಿಗಳ ಮದುವೆ, ಗರ್ಭಪಾತ ಮತ್ತು
ಗರ್ಭನಿರೋಧಕ ಬಳಕೆಯನ್ನು ವಿರೋಧಿಸುವುದಾಗಿ ಪೋಪ್ ಫ್ರಾನ್ಸಿಸ್ ಹೇಳಿದ್ದಾರೆ.
ಸಲಿಂಗಿಗಳ ಮದುವೆ ದೈವೇಚ್ಛೆಯ ಮೇಲೆ
ನಡೆಸುವ ವಿಧ್ವಂಸಕ ಕೃತ್ಯ ಎಂದು ಅವರು
ಹೇಳಿದ್ದಾರೆ.
ಶನಿವಾರ, ಫೆಬ್ರವರಿ 16, 2013
ಅಲ್ಪಸಂಖ್ಯಾತರ ವಿಶ್ವವಿದ್ಯಾಲಯಕ್ಕೆ ರೆವರೆಂಡ್ ಫರ್ಡಿನ್ಯಾಂಡ್ ಕಿಟ್ಟೆಲ್ ಅವರ ಹೆಸರನ್ನಿಡಬೇಕು. 'ದೇಶದಲ್ಲಿ ಅಲ್ಪಸಂಖ್ಯಾತರೆಂದರೆ ಕೇವಲ ಮುಸ್ಲಿಮರಷ್ಟೇನಾ?
ಮಂಗಳೂರು,
ಫೆ. 16: ಶ್ರೀರಂಗಪಟ್ಟಣದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಅಲ್ಪಸಂಖ್ಯಾತರ ವಿಶ್ವವಿದ್ಯಾಲಯಕ್ಕೆ ಕನ್ನಡದ ಬಗ್ಗೆ ವಿಶೇಷ
ಒಲವನ್ನು ಹೊಂದಿದ್ದ ರೆವರೆಂಡ್ ಫರ್ಡಿನ್ಯಾಂಡ್ ಕಿಟ್ಟೆಲ್ ಅವರ ಹೆಸರನ್ನಿಡಬೇಕು ಎಂದು
ಕೆಥೋಲಿಕ್ ಕ್ರೈಸ್ತ ಪರ ಸಂಘಟನೆಗಳ
ಒತ್ತಾಯಕ್ಕೆ ಮತ್ತಷ್ಟು ಬಲ ಬಂದಿದೆ.ಅಲ್ಪಸಂಖ್ಯಾತರಿಗೆ
ಪ್ರತ್ಯೇಕ ವಿವಿಗೆ ಟಿಪ್ಪು ಸುಲ್ತಾನ್
ಹೆಸರಿಡುವುದೆಂದರೆ ಕ್ರೈಸ್ತರಿಗೆ ಗಾಯದ ಮೇಲೆ ಬರೆ
ಎಳೆದಂತೇ ಸರಿ ಎಂದು ಮಂಗಳೂರಿನಲ್ಲಿ
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾಮಾಜಿಕ ಹೋರಾಟಗಾರ ಟಿಜೆ
ಅಬ್ರಹಾಂ ಅವರು ವ್ಯಾಖ್ಯಾನಿಸಿದ್ದಾರೆ'ಶಿಕ್ಷಣ
ಕ್ಷೇತ್ರಕ್ಕೆ ಕ್ರೈಸ್ತರ ಕೊಡುಗೆ ಅಪಾರ. ಕ್ರೈಸ್ತರನ್ನು
ವಿರೋಧಿಸುವವರೂ ಇದನ್ನು ಒಪ್ಪುತ್ತಾರೆ. ಆದರೆ,
ಅಲ್ಪಸಂಖ್ಯಾತರ ವಿವಿ ಸ್ಥಾಪನೆ ವಿಷಯ
ಬಂದಾಗ ಕೇಂದ್ರ ಸರಕಾರ ಸೌಜನ್ಯಕ್ಕಾದರೂ
ಕ್ರೈಸ್ತರನ್ನು ಪರಿಗಣಿಸದಿರುವುದು ಖಂಡನೀಯ' ಎಂದು ಅವರು
ಅಸಮಾಧಾನ ವ್ಯಕ್ತಪಡಿಸಿದ್ದಾರೆ.'ಕೇಂದ್ರ ಸರಕಾರ ಅಲ್ಪಸಂಖ್ಯಾತರಿಗಾಗಿ
ಪ್ರತ್ಯೇಕ ವಿವಿ ಸ್ಥಾಪನೆಗೆ ಮುಂದಾಗಿರುವುದು
ಸ್ವಾಗತಾರ್ಹ. ಆದರೆ ಟಿಪ್ಪು ಸುಲ್ತಾನ್
ಹೆಸರಿಡುವುದು ಸರಿಯಲ್ಲ' ಎಂದು ಮತ್ತೊಮ್ಮೆ ಅವರು
ಪ್ರತಿಪಾದಿಸಿದ್ದಾರೆ.'ದೇಶದಲ್ಲಿ ಅಲ್ಪಸಂಖ್ಯಾತರೆಂದರೆ ಕೇವಲ ಮುಸ್ಲಿಮರಷ್ಟೇನಾ? ಬರೀ
ಮತ ಬ್ಯಾಂಕ್ ರಾಜಕಾರಣ ಇವರದು.
ಅದೇ ಟಿಪ್ಪು ಬದಲು ಮಾಜಿ
ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ
ಹೆಸರನ್ನಿಡಲು ಕೇಂದ್ರ ಸರಕಾರ ಸಮಾಲೋಚಿಸಿದ್ದರೆ
ನಾವೇ ಅಲ್ಲ, ಹಿಂದೂಗಳೂ ವಿರೋಧ
ವ್ಯಕ್ತಪಡಿಸುತ್ತಿರಲಿಲ್ಲ' ಎಂದು ಅಭಿಪ್ರಾಯಪಟ್ಟಿದ್ದಾರೆ.'ಶ್ರೀರಂಗಪಟ್ಟಣ ಕ್ರೈಸ್ತರಿಗೆ
ಅವಮಾನದ ಸ್ಥಳ. ಟಿಪ್ಪು ಸುಲ್ತಾನ್
ತನ್ನ ಆಳ್ವಿಕೆ ಅವಧಿಯಲ್ಲಿ ಕರಾವಳಿ
ಪ್ರದೇಶದಲ್ಲಿದ್ದ ಕ್ರೈಸ್ತರನ್ನು ಸೆರೆ ಹಿಡಿದು ಶ್ರೀರಂಗಪಟ್ಟಣಕ್ಕೆ
ಕರೆ ತರುತ್ತಿದ್ದ. ಬಳಿಕ ಅವರನ್ನು ಇಸ್ಲಾಂ
ಧರ್ಮಕ್ಕೆ ಮತಾಂತರ ಮಾಡುತ್ತಿದ್ದ ಎಂದು
ಸ್ವತಃ ಟಿಪ್ಪುವಿನ ಪುತ್ರ ಗುಲಾಂ ಮೊಹಮ್ಮದ್
ತನ್ನ ಕೃತಿಯಲ್ಲಿ ಬಹಿರಂಗಪಡಿಸಿದ್ದಾನೆ. ಹಾಗಾಗಿ ಶ್ರೀರಂಗಪಟ್ಟಣ ಕ್ರೈಸರಿಗೆ
ನೋವು ತರುವ ಸ್ಥಳ. ಕ್ರೈಸ್ತರನ್ನು
ಅವಮಾನಿಸಿ, ಮತಾಂತರಗೊಳಿಸಿದ ಸ್ಥಳದಲ್ಲಿ ಸ್ಥಾಪನೆಯಾಗುವ ವಿವಿಗೆ ಟಿಪ್ಪು ಸುಲ್ತಾನ್
ಹೆಸರಿಡಲು ಅವಕಾಶ ನೀಡುವುದಿಲ್ಲ' ಎಂದು
ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.'ಟಿಪ್ಪು
ಸುಲ್ತಾನ್ ಮಹಾನ್ ಹೋರಾಟಗಾರನಿರಬಹುದು. ಆದರೆ,
ಶಿಕ್ಷಣ ಕ್ಷೇತ್ರಕ್ಕೆ ಯಾವುದೇ ಕೊಡುಗೆ ನೀಡಿಲ್ಲ.
ತಾನು ಜಯಿಸಿದ ಪ್ರದೇಶಗಳ ಹೆಸರನ್ನೂ
ಬದಲಾಯಿಸಿದ್ದ. ಮೈಸೂರಿಗೆ ನಜರಾಬಾದ್ ಎಂಬ ಹೆಸರಿಟ್ಟಿದ್ದ. ಹಾಗೆಯೇ,
ಹಲವು ಪ್ರದೇಶಗಳ ಹೆಸರು ಬದಲಿಸಿದ್ದ' ಎಂದು
ಅವರು ಹೇಳಿದ್ದಾರೆ. 'ಕನ್ನಡಕ್ಕೆ ಪ್ರಥಮ ಇಂಗ್ಲಿಷ್- ಕನ್ನಡ
ನಿಘಂಟು ನೀಡಿದ ಗೌರವಾನ್ವಿತ ಫರ್ಡಿನ್ಯಾಂಡ್
ಕಿಟ್ಟೆಲ್ ಅವರು ಭಾಷೆಗೆ ನೀಡಿದ
ಕೊಡುಗೆ ಪ್ರಶ್ನಾತೀತ. ಹಾಗಾಗಿ ಉದ್ದೇಶಿತ ವಿವಿಗೆ
ಕಿಟ್ಟೆಲ್ ಅವರ ಹೆಸರಿಡಬೇಕು. ಈ
ಕುರಿತು ಶನಿವಾರ ರಾಜ್ಯಪಾಲರಿಗೆ ಮನವಿ
ಸಲ್ಲಿಸಲಾಗುವುದು' ಎಂದು ಅವರು ತಿಳಿಸಿದ್ದಾರೆ.
'ವಿವಿಗೆ ಟಿಪ್ಪು ಸುಲ್ತಾನ್ ಹೆಸರಿಡುವ
ಪ್ರಸ್ತಾವದ ಹಿಂದೆ ರಾಜಕೀಯ ದುರುದ್ದೇಶವಿದೆ.
ವೋಟ್ ಬ್ಯಾಂಕ್ ಉದ್ದೇಶದಿಂದ ಕೇಂದ್ರ
ಈ ಪ್ರಯತ್ನಕ್ಕೆ ಮುಂದಾಗಿದ್ದು,
ಇದಕ್ಕೆ ಆಸ್ಪದ ನೀಡುವುದಿಲ್ಲ' ಎಂದು
ಎಚ್ಚರಿಸಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)



