ಮಂಗಳವಾರ, ಮೇ 1, 2012

ಬಿಷಪ್ ಅಂದ್ರೆ ಹೀಗಿರಬೇಕು.


ಬಿಷಪ್ ಅಂದ್ರೆ ಹೀಗಿರಬೇಕು.  ಸಭೆಗಳ ಬಗ್ಗೆ ಅಪಾರವಾದ ಕಾಳಜಿ, ಅದರಲ್ಲೂ ಹಳ್ಳಿ ಸಭೆಗಳ ಬಗ್ಗೆ ಹೆಚ್ಚು ಕಾಳಜಿ, ಜನರೊಡನೆ ಬೆರೆತು ಸೇವೆ  ಮಾಡುವ ಅಪರೂಪದ ವ್ಯಕ್ತಿತ್ವ, ಯಾರು ಎಂಥಾ ಸಮಸ್ಯೆಗಳನು ಹೋತ್ತು ತಂದರು ಸಮಸ್ಯೆಗೆ ಸೂಕ್ತ ಪರಿಹಾರ C S I. ಮಂಗಳೂರು ಬಿಶೋಪ್ ಸದಾನಂದರವರಲ್ಲಿ. ಸಮಾದಾನದ ಅಪರೂಪದ ವ್ಯಕ್ತಿ, ಯಾವಾಗಲು ಹಸನ್ಮುಖಿ  ಸೇರಂಪುರು (ಶರಂಪುರ) ಯೂನಿವರ್ಸಿಟಿಯ ಕುಲಸಚಿವ ಪದವಿ ಇದ್ದರು ಅಹಂ ಇಲ್ಲವೇ ಇಲ್ಲ, ಮನಸಿನಲ್ಲಿ ಬರಿ ಸೇವೆ ಸೇವೆ ಸೇವೆ, ನಮ್ಗೂ C S I - k N D ಗೆ  ಇಂತಹ ಬಿಷಪ್ ರೆ   ಬೇಕಲ್ಲವೇ.
                                                                   

ಭಾನುವಾರ, ಏಪ್ರಿಲ್ 15, 2012

ಈ“ಪಾದ್ರಿಗಳಿಗೊಂದು ಸವಾಲು” ” ಇದೂ ಟೀಕೆ ಅಲ್ಲ ತಿದ್ದುವಿಕೆ “

“ಪಾದ್ರಿಗಳಿಗೊಂದು ಸವಾಲು” ” ಇದೂ ಟೀಕೆ ಅಲ್ಲ ತಿದ್ದುವಿಕೆ “  ಅಲ್ಲಾರೀ ನಿಮ್ಮ ನಾಲ್ಕು ಜನರ ಪೋಟೋ ಹಾಕಿಕೊಂಡಿದ್ದು ಓಕೆ ನೀವೆಲ್ಲಾ  ಹಾಗೆಯೇ ಇದ್ದಿರಿ ಸಭೆಯವರೀಗೂ ಗೊತ್ತು.  ಆದ್ರೆ ನಾಲ್ಕು ಜನರ ಪೋಟೋದ ಮೇಲೆ ಇನೊಂದು ಪೋಟೋ ಇದೆ ಅದು ಯಾರ  ಪೋಟೋ? ( ಚಿತ್ರ) ಅಲ್ಲಾರೀ ಪಾದ್ರಿಗಳೆ  ನಿಮ್ಮಲ್ಲೇ ಆ  ಮೂಢನಂಬಿಕೆಗಳು ಹೋಗಿಲ್ಲ ಅಂದ್ರೆ ಹೇಗೆ ? ತಿದ್ದಿ ಬುದ್ಧಿ ಹೇಳುವ  ನೀವೇ ಹಾದಿ ತಪ್ಪಿಸಿದರೆ ಸಭೆಯವರ ಗತಿಯೇನು? ಬೇಜಾರ್ ಮಾಡ್ಕೋಬೇಡಿ ಪಾದ್ರಿಗಳೆ.  BIBLE ನಲ್ಲಿ ಆ ಚಿತ್ರದ ಬಗ್ಗೆ ಯಾವ ಆಧಾರವೂ ಇಲ್ಲಾ. ಬೇಕಾದ್ರೆ ನಾನು ಸವಾಲು ಹಾಕಲು ಸಿದ್ದ. ಇದು ಚಿಕ್ಕ ಸಂಗತಿ ಅಲ್ಲ ಗಂಭೀರವಾಗಿ ತೆಗೆದುಕೊಳ್ಳಿ.
C S I - k N D ಬಿಶೋಪ್ ಪ್ಯಾನಲ್ ಚುನಾವಣೆ ಯಾರಾದ್ರು   ಬಿಶೋಪ್ ಆಗ್ರಿ , ಸೇವೆ ಮಾಡೋದು  ಮರಿಬೇಡಿ . ಈ  ಹಿಂದೆ   ಬಿಶೋಪ್ ಆಧೋರು , ಪಾದ್ರಿಗಳಾಗಿದ್ಧಾಗ  ಚೆನ್ನಾಗೆ ಇದ್ರೂ . ಬಿಶೋಪ್  ಆದ  ಮೇಲೆ ಅವರ  ನಡವಳಿಕೆಯನ್ನು ಸಭೆಯವರು ಕಂಡಿದ್ಧು ಇದೆ. ಬಿಶೋಪ್ ಆದಮೇಲೆ ಗತ್ತೇ ಬಧಲಾಗಿದ್ಧು ಕಂಡಿದ್ಧಾರೆ .ಬಿಶೋಪ್ ಆದೋರು ಬಹಳ ಶ್ರೀಮಂತಿಕೆಯನ್ನು  ಕಂಡಿದ್ಧಾರೆ . ಆಸ್ತಿ ಗೋಷಣೆ ಇಗ್ಲೆ ಮಾಡಿದರೆ ಒಳ್ಳೇದು . ಒಂದು ಸಮೀಕ್ಷೆಯ ಪ್ರಕಾರ ರೆ||ನಿರಂಜನ್  ಮತ್ತು ರೆ|| ಹುಲಗೇರಿ ಪ್ಯಾನೆಲ್ಗೆ ಬರುವ ಸಾಧ್ಯತೆ ಇದೆ .ಇಬ್ಬರು ಆಟಕ್ಕೆ  ಉಂಟು ೮ ಜನ  ಲೆಕಕ್ಕೆ   ಇಲ್ಲ .   ಪ್ಯಾನಲ್ಗೆ  ಬರುವ ಇನ್ನು ಇಬ್ಬರು ಗೊತ್ತಿಲ್ಲ !!!
.

ಗುರುವಾರ, ಮಾರ್ಚ್ 15, 2012

ಯಾವೂದೆ ಒಂದು ವ್ಯಾಯಾಮ ಯಾವೂದೆ ಒಂದು ಧರ್ಮಕ್ಕೆ ಸೀಮಿತ ಅಲ್ಲ. ಅದಕಿಂತ ಮುಕ್ಯವಾದುದು ಪ್ರಾರ್ಥನೆ ಅಂಥಾ ಎಲ್ಲರಿಗೂ ಗೊತ್ತು.



ಯಾವೂದೆ ಒಂದು ವ್ಯಾಯಾಮ ಯಾವೂದೆ ಒಂದು "ಧರ್ಮ"ಕ್ಕೆ ಸೀಮಿತ ಅಲ್ಲ. ಯೋಗ ಮಾಡಬಾರದು “ಸೂರ್ಯ ನಮಸ್ಕಾರ ಮಾಡಲೇಬಾರದು” ಅಂಥಾ ಕೆಲವು ಕ್ರಿಶ್ಚಿಯನ್ನರು ಕೆಲವು ಜನ ಪಾದ್ರಿಗಳು ಹೇಳುತಿದ್ದಾರೆ. ವ್ಯಾಯಾಮ ಮಾಡಿದ್ರೆ ಕಂಡಿತಾ ಆರೋಗ್ಯ ಲಭಿಸುತ್ತೆ ಇದು ಎಲ್ಲರಿಗೂ ತಿಳಿದ ವಿಷಯ. ಅದನ್ನ ಬಿಟ್ಟು ಈ ವ್ಯಾಯಾಮ ಬೇಡ ಆ ವ್ಯಾಯಾಮ ಬೇಡ ಅಂತ ಹೇಳೋದಾ! ಉದಾಹರಣೆಗೆ ಸೂರ್ಯ ನಮಸ್ಕಾರ ಮಾಡಬಾರದು. ಅದು ಸೂರ್ಯನಿಗೆ ನಮಸ್ಕಾರ ಮಾಡಿದಂತೆ ಅನ್ನೋ ವಾದ. ಅಲ್ಲರೀ ಪಾದ್ರಿಗಳೆ ಸೂರ್ಯ ದೇವರು ಅಂಥಾ ನೀವ್ಯಾಕೆ ತಿಳೀತಿರೀ. ಅದು ಆ ವ್ಯಾಯಾಮದ style ಅಸ್ಟೇ. ದೇಹಕ್ಕೂ ಸ್ವಲ್ಪ ವ್ಯಾಯಾಮ ಬೇಕು ಅಲ್ಲವೆ. ಅದಕಿಂತ ಮುಕ್ಯವಾದುದು ಪ್ರಾರ್ಥನೆ ಅಂಥಾ ಎಲ್ಲರಿಗೂ ಗೊತ್ತು. “ಬೇಜಾರು ಮಾಡ್ಕೋಬೇಡಿ ಅರ್ಥಮಾಡ್ಕೊಳ್ಳಿ”

ಶನಿವಾರ, ಮಾರ್ಚ್ 3, 2012

“ದೇವರ ಸೇವೆಗೆ ರಜೆ ಹಾಕಬಾರದು”



ನನ್ನ ತಂದೆ Rev. A D Doddamani. C S I ಸಭೆಗಳಲ್ಲಿ 44 ವರ್ಷಗಳ ಸುದೀರ್ಘವಾದ ಸೇವೆ ಸಲ್ಲಿಸಿದವರು. ದಿನಾಲೂ ಬಿಡುವಿಲ್ಲದೆ ದೇವರ ಸೇವೆಗೆ ಹೋಗೋರು. ಆವಾಗ ವಾಹನಗಳ ಸೌಕರ್ಯ ಅಷ್ಟಾಗಿ ಇರಲಿಲ್ಲ. ನಡೆದು ನಡೆದು ಸುಸ್ತಾಗಿ ಮನೆಗೆ ಬರೋರೂ ಊಟ ಮಾಡಿ ಮಲಗುವ ಮುನ್ನ ನನ್ನನ ಕರೆದು ತಮ್ಮ ದೇವದಾನ ಸ್ವಲ್ಪ ಕಾಲು ಒತ್ತಪ್ಪ ನೋವು ಅನ್ನೋರು. ದಿನಾಲೂ ನಾನು ನನ್ನ ತಂದೆಯವರಿಗೆ ಮಸಾಜ್ ಮಾಡೋದು. ಇಂಥಾ ಒಂದು ಸಂದರ್ಭದಲ್ಲಿ ನಾನು ನನ್ನ ತಂದೆಗೆ ಒಂದು ಪ್ರಶ್ನೆ ಕೇಳ್ದೆ. ಅಲ್ಲಾ ನೀವೂ ದಿನಾಲೂ ಸೇವೆಗೆ ಹೋಗಬೇಕಾ ? ಸ್ವಲ್ಪದಿನಾ ರಜೆಹಾಕಿ ಅಂದೆ. ಆ ಸಂದರ್ಭದಲ್ಲಿ ನನ್ನ ತಂದೆ ನನಗೆ ಹೇಳಿದ ಮಾತು
“ದೇವರ ಸೇವೆಗೆ ರಜೆ ಹಾಕಬಾರದು” ತಂದೆ ಹೇಳಿದ ಅನುಭವದ ಮಾತು ಸತ್ಯ ಅಲ್ಲವೆ.









ಬುಧವಾರ, ಫೆಬ್ರವರಿ 29, 2012

ಇದು ಯೇಸು ಕ್ರಿಸ್ತನನಿಗೆ ಮಾಡಿದ ಅಪಮಾನ ಅಲ್ಲವೆ. ಇದು ೧೧ ನೆಯ ಶತಮಾನದಲ್ಲಿ ರಚಿಸಲಾದ ಯೇಸು ಕ್ರಿಸ್ತನ ಕಾಲ್ಪನಿಕ ಚಿತ್ರ. ಇದು ಯೇಸು ಕ್ರಿಸ್ತನ ನಿಜವಾದ ಮುಖವಲ್ಲ. ಬೈಬಲ್‍ನಲ್ಲಿ ಈ



ಇದು ೧೧ ನೆಯ ಶತಮಾನದಲ್ಲಿ ರಚಿಸಲಾದ ಯೇಸು ಕ್ರಿಸ್ತನ ಕಾಲ್ಪನಿಕ ಚಿತ್ರ. ಇದು ಯೇಸು ಕ್ರಿಸ್ತನ ನಿಜವಾದ ಮುಖವಲ್ಲ. ಬೈಬಲ್‍ನಲ್ಲಿ ಈ ಚಿತ್ರಕೆ ಯಾವ ಆಧಾರವು ಇಲ್ಲ. ಆದ್ರೆ ಇದನ್ನೇ ಬಹಳ ಜನ ಮನೆಗಳಲ್ಲಿ ಗೋಡೆಗೆ ಹಾಕಿ ಕೊಂಡು ಆರಾಧನೆ ಮಾಡುತ್ತಾರಲ್ಲ. ಇದು ಯೇಸು ಕ್ರಿಸ್ತನನಿಗೆ ಮಾಡಿದ ಅಪಮಾನ ಅಲ್ಲವೆ. ನಿನಗೆ ಆಕಾಶದಲ್ಲಾಗಲಿ ಭೂಮಿಯಲ್ಲಾಗಲಿ ಭೂಮಿಯ ಕೆಳಗಿರುವ ನೀರುಗಳಲ್ಲಾಗಲಿ ಯಾವದರ ವಿಗ್ರಹವನ್ನಾಗಲಿ ರೂಪವನ್ನಾಗಲಿ ನೀನು ಮಾಡಿಕೊಳ್ಳ ಬಾರದು. ನೀನು ಅವುಗಳಿಗೆ ಅಡ್ಡಬೀಳ ಬಾರದು. ಎಂದು ಬೈಬಲ್‍ನಲ್ಲಿಯೇ ಹೇಳಿರುವಾಗ ಇದಕಿಂತ ಆಧಾರ ಇನ್ನೇನು ಬೇಕು. ಮೂಢನಂಬಿಕೆಗಳು ಸರಿಯಲ್ಲ. ಅವು ದೇವರಿಂದ ನಮ್ಮನು ದೂರ ಮಾಡುತ್ತವೆ. ಯಾರೋ ಹೇಳಿದ್ದು ನಂಬಬೇಡಿ. ಬೈಬಲ್‍ನ ಓದಿ ಅದರಂತೆಯೇ ನಂಬಿ ಬದುಕೋಣ.



ಶುಕ್ರವಾರ, ಫೆಬ್ರವರಿ 17, 2012

ಬಹಳ ಜನ ಕ್ರೈಸ್ತ ಸಮಾಜದವರು ವಿಶೇಷವಾಗಿ ಪಾದ್ರಿಗಳು ಈ ದೇವರ ವಾಕ್ಯದಂತೆ ನಡೆದುಕೊಳ್ಳುತ್ತಿಲ್ಲಾ? (ಎಲ್ಲರೂ ಅಲ್ಲ) ಯಾಕೆ ಏನಾಗಿದೆ ನಮ್ಮ ಜನರಿಗೆ “ ನಿನಗೆ ಆಕಾಶದಲ್ಲಾಗಲಿ ಭೂಮಿಯಲ್

ಬಹಳ ಜನ ಕ್ರೈಸ್ತ ಸಮಾಜದವರು ವಿಶೇಷವಾಗಿ ಪಾದ್ರಿಗಳು ಈ ದೇವರ ವಾಕ್ಯದಂತೆ ನಡೆದುಕೊಳ್ಳುತ್ತಿಲ್ಲಾ? (ಎಲ್ಲರೂ ಅಲ್ಲ) ಯಾಕೆ ಏನಾಗಿದೆ ನಮ್ಮ ಜನರಿಗೆ “ ನಿನಗೆ ಆಕಾಶದಲ್ಲಾಗಲಿ ಭೂಮಿಯಲ್ಲಾಗಲಿ ಭೂಮಿಯ ಕೆಳಗಿರುವ ನೀರುಗಳಲ್ಲಾಗಲಿ ಯಾವದರ ವಿಗ್ರಹವನ್ನಾಗಲಿ ರೂಪವನ್ನಾಗಲಿ ನೀನು ಮಾಡಿಕೊಳ್ಳ ಬಾರದು. ನೀನು ಅವುಗಳಿಗೆ ಅಡ್ಡಬೀಳ ಬಾರದು. ಹೀಗೆ ಸತ್ಯವೇದದಲ್ಲಿ ಬರೆಯಲಾಗಿದೆ. ಆದರೂ ಯಾಕೆ? ಅಲ್ಲಿ ಹೇಳಿದಂತೆ ನಡೆದುಕೊಳ್ಳುತ್ತಿಲ್ಲ. ಒಂದೇ ಒಂದು ಸಾರೀ ಯೋಚಿಸಿ. ಸತ್ಯವೇದ ಓದುವ ಹವ್ಯಾಸ ಬೆಳೆಸಿಕೊಳ್ಳಿ ಒಂದು ದಿನ ಸತ್ಯ ಗೊತ್ತಾಗುತ್ತದೆ. ಇದು ಟೀಕೆ ಅಲ್ಲ ತಿದ್ದುವಿಕೆ.