ಶುಕ್ರವಾರ, ಡಿಸೆಂಬರ್ 21, 2012

ಹೊಸ ಟಿವಿ ಚಾನಲ್ ಯೇಸುಕ್ರಿಸ್ತನ ಬೋಧನೆ ಆಧಾರಿತ ವಾಹಿನಿ


ಡಿ 21 : ಡಿವೈನ್ ವರ್ಡ್ ಎನ್ನುವ ಹೆಸರಿನಲ್ಲಿ ಹೊಸ ಟಿವಿ ಚಾನಲ್ ಡಿಸೆಂಬರ್ 22ರಿಂದ ಆರಂಭಗೊಳ್ಳಲಿದೆ. ಕನ್ನಡ, ಕೊಂಕಣಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಯೇಸುಕ್ರಿಸ್ತನ ಬೋಧನೆ ಆಧಾರಿತ ಕಾರ್ಯಕ್ರಮಗಳನ್ನು ವಾಹಿನಿ ಪ್ರಸಾರ ಮಾಡಲಿದೆ. ಡಿವೈನ್ ವರ್ಡ್ ಚಾರಿಟಬಲ್ ಟ್ರಸ್ಟ್ ಮಾಲಕತ್ವದಲ್ಲಿ ವಾಹಿನಿ ಕಾರ್ಯನಿರ್ವಹಿಸಲಿದ್ದು.. ವೆಸ್ಟರ್ನ್ ಇನ್ಸ್ಟಿಟ್ಯೂಟ್ ಅಧ್ಯಕ್ಷ ಸ್ಟೀಫನ್ ಮೆಂಡಿಸ್ ವಾಹಿನಿಯ ಜವಾಬ್ದಾರಿ ನಿರ್ವಹಿಸಲಿದ್ದಾರೆ. ವಾಹಿನಿಯು ಶಿಕ್ಷಣ, ಆರೋಗ್ಯ ಮುಂತಾದ ಸಮಾಜಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿದೆ ಎನ್ನಲಾಗಿದೆ. ಟಿವಿ ಕೇಬಲ್ ಮೂಲಕವಲ್ಲದೆ ಅಂತರ್ಜಾಲದ ಮೂಲಕ ವಾಹಿನಿಯ ಕಾರ್ಯಕ್ರಮಗಳನ್ನು ವಿಶ್ವದಾದ್ಯಂತ ವೀಕ್ಷಿಸಬಹುದು. ರಾಜ್ಯ ಕ್ಯಾಥೋಲಿಕರ ಮೊದಲ ಚಾನಲ್ ಇದಾಗಿದ್ದು ಹೊಸ ಹೊಸ ಸಮಾಜಮುಖಿ ಕಾರ್ಯಕ್ರಮಗಳನ್ನು ತರಲಿದೆ ಎಂದು ಸ್ಟೀಫನ್ ಮೆಂಡಿಸ್ ತಿಳಿಸಿದ್ದಾರೆ. ಇಂಟರ್ನೆಟ್ ನಲ್ಲಿ ಕೊಂಡಿಯ ಮೂಲಕ ವಾಹಿನಿಯ ಕಾರ್ಯಕ್ರಮ ವೀಕ್ಷಿಸಬಹುದು

 

 

 

ಬುಧವಾರ, ನವೆಂಬರ್ 14, 2012

ಮಿಶನರಿ ಸೇವೆ - ತಾಂಜಾನಿಯಾಕ್ಕೆ ಮಂಗಳೂರಿನ ಧರ್ಮಗುರುಗಳು.


ತಾಂಜಾನಿಯಾಕ್ಕೆ ಮಂಗಳೂರಿನ ಧರ್ಮಗುರುಗಳು - ಆಫ್ರಿಕಾದ ತಾಂಜಾನಿಯಾದಲ್ಲಿ ಧಾರ್ಮಿಕ ಸೇವೆಯ ಕೈಂಕರ್ಯವನ್ನು ಮಂಗಳೂರು ಕ್ಯಾಥೊಲಿಕ್ ಧರ್ಮ ಪ್ರಾಂತ್ಯ ಕೈಗೆತ್ತಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಮೊದಲ ತಂಡದ ಇಬ್ಬರು ಧರ್ಮಗುರುಗಳು ಬುಧವಾರ ತಾಂಜಾನಿಯಾಕ್ಕೆ ಪ್ರಯಾಣ ಬೆಳೆಸಿದರು. ಭಾರತದ ಮಾಜಿ ರಾಷ್ಟ್ರೀಯ ಕ್ಯಾಥೊಲಿಕ್ ಯುವಜನ ನಿರ್ದೇಶಕ ಫಾ| ಆಲ್ವಿನ್ ಡಿ'ಸೋಜಾ ಮತ್ತು ಮಡಂತ್ಯಾರ್ ಚರ್ಚ್ನ ಸಹಾಯಕ ಗುರು ಫಾ| ರೊನಾಲ್ಡ್ ಪಿಂಟೊ ಅವರು ತಾಂಜಾನಿಯಾಕ್ಕೆ ತೆರಳಿದವರು.

ಮಂಗಳವಾರ, ಆಗಸ್ಟ್ 14, 2012

ಮಧ್ಯ-ಪ್ರಾಚ್ಯ: ಕ್ರೈಸ್ತರಿಗೆ ಧಕ್ಕೆಯಿಲ್ಲ !

ತ್ರಿಶ್ಶೂರ್, ಮಧ್ಯ-ಪ್ರಾಚ್ಯದಲ್ಲಿ ಕ್ರೈಸ್ತರ ಸಂಖ್ಯೆ ಕುಸಿಯುತ್ತಿರುವುದು ಮಹಾನ್ ವಿಪತ್ತು ಎಂದು ಧರ್ಮಶಾಸ್ತ್ರಜ್ಞ ಡಾ. ಹಾರ್ಮನ್ ಟ್ಯುಲೆ ಹೇಳಿದ್ದಾರೆ. ಜನಾಂಗ ವಿಕಾಸ, ಸರ್ವಾಧಿಕಾರತ್ವ ಮತ್ತು ರಾಜಕೀಯ ಅಸ್ಥಿರತೆ ಇದಕ್ಕೆ ಕಾರಣೀಭೂತವಾಗಿದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.
ಮಧ್ಯ-ಪ್ರಾಚ್ಯದಲ್ಲಿ ಜೀವಿಸುತ್ತಿರುವ ಕ್ರೈಸ್ತರಿಗೆ ಅಲ್ಲಿ ವಾಸ್ತವ್ಯ ಮುಂದುವರಿಸಲು ಆಸಕ್ತಿಯೇ ಇಲ್ಲ. ಹಾಗಂತ ಮಧ್ಯ-ಪ್ರಾಚ್ಯಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ಜನಾಂಗ ವಿಕಾಸ, ಸರ್ವಾಧಿಕಾರತ್ವ ಮತ್ತು ರಾಜಕೀಯ ಅಸ್ಥಿರತೆ ಇದಕ್ಕೆ ಕಾರಣೀಭೂತವಾಗಿದೆ ಎಂದು ಅವರು ವ್ಯಾಖ್ಯಾನಿಸಿದ್ದಾರೆ.
ಬೆಲ್ಜಿಯಂನ ಲ್ಯುವೆನ್ ಕ್ಯಾಥೊಲಿಕ್ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿರುವ ಡಾ. ಟ್ಯುಲೆ ಅವರು 'ಮಧ್ಯ-ಪ್ರಾಚ್ಯದಲ್ಲಿ ಇಸ್ಲಾಂ ಜತೆಗೆ ಕ್ರೈಸ್ತರ ಹೊಂದಾಣಿಕೆ' ಎಂಬ ವಿಷಯದ ಕುರಿತಾದ ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಅವರು ಸೋಮವಾರ ಮಾತನಾಡುತ್ತಿದ್ದರು.
ಮಧ್ಯ-ಪ್ರಾಚ್ಯದಲ್ಲಿ ವಾಸಿಸುತ್ತಿರುವ ಕ್ರೈಸ್ತರು ಗುಳೆ ಎದ್ದುಹೋಗುತ್ತಿದ್ದಾರೆ. ವಲಸೆ ಹೋಗುವುದೂ ಅವರಿಗೆ ಅನಾದಿ ಕಾಲದಿಂದಲೂ ಆಪ್ಯಾಯಮಾನವೇ. ಯುರೋಪ್ ಮತ್ತು ಅಮೆರಿಕದತ್ತ ಅವರು ಸದಾ ಮುಖ ಮಾಡಿತ್ತಾರೆ. ಏಕೆಂದರೆ ಆ ಭಾಗದಲ್ಲಿ ಅವರ ಕುಟುಂಬಸ್ಥರೋ, ಪರಿಚಯಸ್ಥರೋ ಯಾರೋ ಒಬ್ಬರು ಅಲ್ಲಿ ನೆಲೆಸಿರುತ್ತಾರೆ.
ಹಾಗಾಗಿ ಅವರು ಸುಲಭವಾಗಿ ಅಲ್ಲಿಗೆ ಸೇರಿಕೊಳ್ಳುತ್ತಾರೆ. ಆದರೆ ಮುಸ್ಲಿಮರಿಗೂ ಅಂತಹ ಆಸೆಯಿದ್ದರೂ ಅವರು ಹೊಸಬರಾಗಿರುವುದರಿಂದ ಯುರೋಪ್ ಮತ್ತು ಅಮೆರಿಕದತ್ತ ವಲಸೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಡಾ. ಟ್ಯುಲೆ ಹೇಳಿದ್ದಾರೆ.
'ಮಧ್ಯ ಪ್ರಾಚ್ಯದಲ್ಲಿ ಸಾಮಾನ್ಯವಾಗಿ ಮುಸ್ಲಿಮರು ಚರ್ಚು ಅಥವಾ ಕ್ರೈಸ್ತ-ವಿರೋಧಿಗಳಲ್ಲ. ಆದರೆ ಅಪರಾಧಿಗಳು, ಸಮಾಜಘಾತುಕ ಶಕ್ತಿಗಳು ತಮ್ಮನ್ನು ಸರಕಾರಿ ಪ್ರಾಯೋಜಕರು ಎಂದುಬಿಂಬಿಸಿಕೊಂಡು ಕೃತ್ರಿಮ ಜನಾಂಗೀಯ ಕಲಹದಲ್ಲಿ ಭಾಗಿಯಾಗುತ್ತಿವೆ. ಆದ್ದರಿಂದ ಮಧ್ಯ ಪ್ರಾಚ್ಯದಲ್ಲಿನ ಬಹುಸಂಖ್ಯಾತ ಮುಸ್ಲಿಮರು ಕ್ರೈಸ್ತ-ವಿರೋಧಿಗಳು ಎಂದು ಜರಿಯುವುದು ಸರ್ವತಾ ಸಾಧುವಲ್ಲ' ಎಂದು ವಸ್ತುಸ್ಥಿತಿಯನ್ನು ಬಿಡಿಸಿಟ್ಟರು.
ಮಧ್ಯ ಪ್ರಾಚ್ಯದಲ್ಲಿನ ಮುಸ್ಲಿಮರು ಮತ್ತು ಕ್ರೈಸ್ತರ ನಡುವೆ ಸಾಮರಸ್ಯ ಮೂಡಿಸಲು ಪೋಪ್ ಬೆನಿಡಿಕ್ಟ್ XVI ಅವರು ಮುಂದಿನ ತಿಂಗಳು ಲೆಬನಾನಿಗೆ ಭೇಟಿ ನೀಡುತ್ತಿದ್ದಾರೆ. ಮಧ್ಯ ಪ್ರಾಚ್ಯದಲ್ಲಿ ಕ್ರೈಸ್ತರು ಶಾಂತಿ-ನೆಮ್ಮದಿಯನ್ನು ಬದುಕಬಹುದು ಎಂಬುದನ್ನು ಸಾದರಪಡಿಸುವ ನಿಟ್ಟಿನಲ್ಲಿ ಪೋಪ್ ಬೆನಿಡಿಕ್ಟ್ ಭೇಟಿ ಮಹತ್ವದ ಪಾತ್ರವಹಿಸಲಿದೆ ಎಂದು ಅವರು ಆಶಿಸಿದರು.
ಆದರೆ ಈಗಾಗಲೇ ಕೆಲವರು ಹೇಳುತ್ತಿರುವಂತೆ ಮುಸ್ಲಿಮರು ಮತ್ತು ಕ್ರೈಸ್ತರ ನಡುವೆ ಅಂತಾರಾಷ್ಟ್ರೀಯ ಮಟ್ಟದಲ್ಲಿ The Crusade ಮಾದರಿಯಲ್ಲಿ ಕಲಹ ತಲೆದೋರಲಿದೆ ಎಂಬುದನ್ನು ಅವರು ಬಲವಾಗಿ ಅಲ್ಲಗಳೆದರು.

ಸೋಮವಾರ, ಜೂನ್ 25, 2012

ಪಾದ್ರಿಯಾದ ವಿಜಯ್ ಮಲ್ಯ ಪುತ್ರ!. ಕತ್ತಲಿನಿಂದ ಬೆಳಕಿನಡೆಗೆ ಸಿದ್ದಾರ್ಥ್ ಮಲ್ಯ.

ಬೆಂಗಳೂರು: ಇದನ್ನು ಭೂಮಿಯ ಮೇಲಿರುವ ಯಾರೂ ಕೂಡ ಊಹಿಸಿರಲಿಕ್ಕಿಲ್ಲ, ಕಂಪನಿ ವ್ಯವಹಾರ, ಸಿಕ್ಕಸಿಕ್ಕ ಹುಡುಗಿಯರೊಂದಿಗೆ ಪಾರ್ಟಿ ಮತ್ತು ಬಾಲಿವುಡ್ ಹೆಚ್ಚಿನ ಎಲ್ಲಾ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಉದ್ಯಮಿ ವಿಜಯ್ ಮಲ್ಯರ ಪುತ್ರ ಸಿದ್ದಾರ್ಥ್ ಮಲ್ಯ ಚರ್ಚ್ ಪಾದ್ರಿಯಾಗಿದ್ದಾರೆ ಆದರೆ ಇದು ನಿಜ.
ಯುಬಿ ಗ್ರೂಪ್ ಆಡಳಿತ ನಿರ್ದೇಶಕರಲ್ಲಿ ಒಬ್ಬರಾಗಿರುವ ಸಿದ್ದಾರ್ಥ್ ಮಲ್ಯ ತಾನು ಯೂನಿವರ್ಸಲ್ ಲೈಫ್ ಚರ್ಚ್ ಪ್ರಮಾಣಿಕೃತ ಪಾದ್ರಿಯೆಂದು ವಿಶ್ವಕ್ಕೆ ಹೇಳಿಕೊಂಡಿದ್ದಾರೆ. ಅವರು ಈಗ ಪಾದ್ರಿ ಮಾಡುವಂತಹ ಎಲ್ಲಾ ಕಾರ್ಯಗಳನ್ನು ಮಾಡಬಹುದಾಗಿದೆಯಂತೆ. ಜೂನಿಯರ್ ಮಲ್ಯ ಸ್ಫೋಟಕ ವಿಷಯವನ್ನು ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ. ಟ್ವಿಟ್ಟರ್ ನಲ್ಲಿ ಸಿದ್ದಾರ್ಥ್ ಹೀಗೆ ಬರೆದಿದ್ದಾರೆ. ನನ್ನ ಪ್ರಮಾಣಪತ್ರ ನಾನು ದೀಕ್ಷೆ ಪಡೆದಿರುವುದನ್ನು ತೋರಿಸುತ್ತದೆ. ನಾನು ಈಗ ಕಾನೂನು ಬದ್ಧವಾಗಿ ರೆವರೆಂಡ್ ಮಲ್ಯ ಎಂದು ಕರೆದುಕೊಳ್ಳಬಹುದು. ಮತ್ತಷ್ಟು ಟ್ವಿಟ್ ಮಾಡಿರುವ ಸಿದ್ದಾರ್ಥ್, ನಾನು ಇನ್ನು ಮದುವೆ, ಉತ್ತರಕ್ರಿಯೆ, ಬ್ಲೆಸ್ಸಿಂಗ್, ಉಪನ್ಯಾಸ ಮತ್ತು ಸಭೆಗಳನ್ನು ನಡೆಸಬಹುದು ಎಂದು ಬರೆದುಕೊಂಡಿದ್ದಾರೆ. ಆದರೆ ಮಲ್ಯ ರೀತಿಯ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು? ಆತ್ಮಸಾಕ್ಷಿಯ ಕರೆಯೇ? ಸಿದ್ದಾರ್ಥನೇ ಇದಕ್ಕೆ ಉತ್ತರಿಸಬೇಕು.
 

ಮಂಗಳವಾರ, ಮೇ 1, 2012

ಬಿಷಪ್ ಅಂದ್ರೆ ಹೀಗಿರಬೇಕು.


ಬಿಷಪ್ ಅಂದ್ರೆ ಹೀಗಿರಬೇಕು.  ಸಭೆಗಳ ಬಗ್ಗೆ ಅಪಾರವಾದ ಕಾಳಜಿ, ಅದರಲ್ಲೂ ಹಳ್ಳಿ ಸಭೆಗಳ ಬಗ್ಗೆ ಹೆಚ್ಚು ಕಾಳಜಿ, ಜನರೊಡನೆ ಬೆರೆತು ಸೇವೆ  ಮಾಡುವ ಅಪರೂಪದ ವ್ಯಕ್ತಿತ್ವ, ಯಾರು ಎಂಥಾ ಸಮಸ್ಯೆಗಳನು ಹೋತ್ತು ತಂದರು ಸಮಸ್ಯೆಗೆ ಸೂಕ್ತ ಪರಿಹಾರ C S I. ಮಂಗಳೂರು ಬಿಶೋಪ್ ಸದಾನಂದರವರಲ್ಲಿ. ಸಮಾದಾನದ ಅಪರೂಪದ ವ್ಯಕ್ತಿ, ಯಾವಾಗಲು ಹಸನ್ಮುಖಿ  ಸೇರಂಪುರು (ಶರಂಪುರ) ಯೂನಿವರ್ಸಿಟಿ ಕುಲಸಚಿವ ಪದವಿ ಇದ್ದರು ಅಹಂ ಇಲ್ಲವೇ ಇಲ್ಲ, ಮನಸಿನಲ್ಲಿ ಬರಿ ಸೇವೆ ಸೇವೆ ಸೇವೆ, ನಮ್ಗೂ C S I - k N D ಗೆ  ಇಂತಹ ಬಿಷಪ್ ರೆ   ಬೇಕಲ್ಲವೇ.
                                                                   

ಭಾನುವಾರ, ಏಪ್ರಿಲ್ 15, 2012

ಈ“ಪಾದ್ರಿಗಳಿಗೊಂದು ಸವಾಲು” ” ಇದೂ ಟೀಕೆ ಅಲ್ಲ ತಿದ್ದುವಿಕೆ “

“ಪಾದ್ರಿಗಳಿಗೊಂದು ಸವಾಲು” ” ಇದೂ ಟೀಕೆ ಅಲ್ಲ ತಿದ್ದುವಿಕೆ “  ಅಲ್ಲಾರೀ ನಿಮ್ಮ ನಾಲ್ಕು ಜನರ ಪೋಟೋ ಹಾಕಿಕೊಂಡಿದ್ದು ಓಕೆ ನೀವೆಲ್ಲಾ  ಹಾಗೆಯೇ ಇದ್ದಿರಿ ಸಭೆಯವರೀಗೂ ಗೊತ್ತು.  ಆದ್ರೆ ನಾಲ್ಕು ಜನರ ಪೋಟೋದ ಮೇಲೆ ಇನೊಂದು ಪೋಟೋ ಇದೆ ಅದು ಯಾರ  ಪೋಟೋ? ( ಚಿತ್ರ) ಅಲ್ಲಾರೀ ಪಾದ್ರಿಗಳೆ  ನಿಮ್ಮಲ್ಲೇ ಆ  ಮೂಢನಂಬಿಕೆಗಳು ಹೋಗಿಲ್ಲ ಅಂದ್ರೆ ಹೇಗೆ ? ತಿದ್ದಿ ಬುದ್ಧಿ ಹೇಳುವ  ನೀವೇ ಹಾದಿ ತಪ್ಪಿಸಿದರೆ ಸಭೆಯವರ ಗತಿಯೇನು? ಬೇಜಾರ್ ಮಾಡ್ಕೋಬೇಡಿ ಪಾದ್ರಿಗಳೆ.  BIBLE ನಲ್ಲಿ ಆ ಚಿತ್ರದ ಬಗ್ಗೆ ಯಾವ ಆಧಾರವೂ ಇಲ್ಲಾ. ಬೇಕಾದ್ರೆ ನಾನು ಸವಾಲು ಹಾಕಲು ಸಿದ್ದ. ಇದು ಚಿಕ್ಕ ಸಂಗತಿ ಅಲ್ಲ ಗಂಭೀರವಾಗಿ ತೆಗೆದುಕೊಳ್ಳಿ.
C S I - k N D ಬಿಶೋಪ್ ಪ್ಯಾನಲ್ ಚುನಾವಣೆ ಯಾರಾದ್ರು   ಬಿಶೋಪ್ ಆಗ್ರಿ , ಸೇವೆ ಮಾಡೋದು  ಮರಿಬೇಡಿ . ಈ  ಹಿಂದೆ   ಬಿಶೋಪ್ ಆಧೋರು , ಪಾದ್ರಿಗಳಾಗಿದ್ಧಾಗ  ಚೆನ್ನಾಗೆ ಇದ್ರೂ . ಬಿಶೋಪ್  ಆದ  ಮೇಲೆ ಅವರ  ನಡವಳಿಕೆಯನ್ನು ಸಭೆಯವರು ಕಂಡಿದ್ಧು ಇದೆ. ಬಿಶೋಪ್ ಆದಮೇಲೆ ಗತ್ತೇ ಬಧಲಾಗಿದ್ಧು ಕಂಡಿದ್ಧಾರೆ .ಬಿಶೋಪ್ ಆದೋರು ಬಹಳ ಶ್ರೀಮಂತಿಕೆಯನ್ನು  ಕಂಡಿದ್ಧಾರೆ . ಆಸ್ತಿ ಗೋಷಣೆ ಇಗ್ಲೆ ಮಾಡಿದರೆ ಒಳ್ಳೇದು . ಒಂದು ಸಮೀಕ್ಷೆಯ ಪ್ರಕಾರ ರೆ||ನಿರಂಜನ್  ಮತ್ತು ರೆ|| ಹುಲಗೇರಿ ಪ್ಯಾನೆಲ್ಗೆ ಬರುವ ಸಾಧ್ಯತೆ ಇದೆ .ಇಬ್ಬರು ಆಟಕ್ಕೆ  ಉಂಟು ೮ ಜನ  ಲೆಕಕ್ಕೆ   ಇಲ್ಲ .   ಪ್ಯಾನಲ್ಗೆ  ಬರುವ ಇನ್ನು ಇಬ್ಬರು ಗೊತ್ತಿಲ್ಲ !!!
.

ಗುರುವಾರ, ಮಾರ್ಚ್ 15, 2012

ಯಾವೂದೆ ಒಂದು ವ್ಯಾಯಾಮ ಯಾವೂದೆ ಒಂದು ಧರ್ಮಕ್ಕೆ ಸೀಮಿತ ಅಲ್ಲ. ಅದಕಿಂತ ಮುಕ್ಯವಾದುದು ಪ್ರಾರ್ಥನೆ ಅಂಥಾ ಎಲ್ಲರಿಗೂ ಗೊತ್ತು.



ಯಾವೂದೆ ಒಂದು ವ್ಯಾಯಾಮ ಯಾವೂದೆ ಒಂದು "ಧರ್ಮ"ಕ್ಕೆ ಸೀಮಿತ ಅಲ್ಲ. ಯೋಗ ಮಾಡಬಾರದು “ಸೂರ್ಯ ನಮಸ್ಕಾರ ಮಾಡಲೇಬಾರದು” ಅಂಥಾ ಕೆಲವು ಕ್ರಿಶ್ಚಿಯನ್ನರು ಕೆಲವು ಜನ ಪಾದ್ರಿಗಳು ಹೇಳುತಿದ್ದಾರೆ. ವ್ಯಾಯಾಮ ಮಾಡಿದ್ರೆ ಕಂಡಿತಾ ಆರೋಗ್ಯ ಲಭಿಸುತ್ತೆ ಇದು ಎಲ್ಲರಿಗೂ ತಿಳಿದ ವಿಷಯ. ಅದನ್ನ ಬಿಟ್ಟು ಈ ವ್ಯಾಯಾಮ ಬೇಡ ಆ ವ್ಯಾಯಾಮ ಬೇಡ ಅಂತ ಹೇಳೋದಾ! ಉದಾಹರಣೆಗೆ ಸೂರ್ಯ ನಮಸ್ಕಾರ ಮಾಡಬಾರದು. ಅದು ಸೂರ್ಯನಿಗೆ ನಮಸ್ಕಾರ ಮಾಡಿದಂತೆ ಅನ್ನೋ ವಾದ. ಅಲ್ಲರೀ ಪಾದ್ರಿಗಳೆ ಸೂರ್ಯ ದೇವರು ಅಂಥಾ ನೀವ್ಯಾಕೆ ತಿಳೀತಿರೀ. ಅದು ಆ ವ್ಯಾಯಾಮದ style ಅಸ್ಟೇ. ದೇಹಕ್ಕೂ ಸ್ವಲ್ಪ ವ್ಯಾಯಾಮ ಬೇಕು ಅಲ್ಲವೆ. ಅದಕಿಂತ ಮುಕ್ಯವಾದುದು ಪ್ರಾರ್ಥನೆ ಅಂಥಾ ಎಲ್ಲರಿಗೂ ಗೊತ್ತು. “ಬೇಜಾರು ಮಾಡ್ಕೋಬೇಡಿ ಅರ್ಥಮಾಡ್ಕೊಳ್ಳಿ”

ಶನಿವಾರ, ಮಾರ್ಚ್ 3, 2012

“ದೇವರ ಸೇವೆಗೆ ರಜೆ ಹಾಕಬಾರದು”



ನನ್ನ ತಂದೆ Rev. A D Doddamani. C S I ಸಭೆಗಳಲ್ಲಿ 44 ವರ್ಷಗಳ ಸುದೀರ್ಘವಾದ ಸೇವೆ ಸಲ್ಲಿಸಿದವರು. ದಿನಾಲೂ ಬಿಡುವಿಲ್ಲದೆ ದೇವರ ಸೇವೆಗೆ ಹೋಗೋರು. ಆವಾಗ ವಾಹನಗಳ ಸೌಕರ್ಯ ಅಷ್ಟಾಗಿ ಇರಲಿಲ್ಲ. ನಡೆದು ನಡೆದು ಸುಸ್ತಾಗಿ ಮನೆಗೆ ಬರೋರೂ ಊಟ ಮಾಡಿ ಮಲಗುವ ಮುನ್ನ ನನ್ನನ ಕರೆದು ತಮ್ಮ ದೇವದಾನ ಸ್ವಲ್ಪ ಕಾಲು ಒತ್ತಪ್ಪ ನೋವು ಅನ್ನೋರು. ದಿನಾಲೂ ನಾನು ನನ್ನ ತಂದೆಯವರಿಗೆ ಮಸಾಜ್ ಮಾಡೋದು. ಇಂಥಾ ಒಂದು ಸಂದರ್ಭದಲ್ಲಿ ನಾನು ನನ್ನ ತಂದೆಗೆ ಒಂದು ಪ್ರಶ್ನೆ ಕೇಳ್ದೆ. ಅಲ್ಲಾ ನೀವೂ ದಿನಾಲೂ ಸೇವೆಗೆ ಹೋಗಬೇಕಾ ? ಸ್ವಲ್ಪದಿನಾ ರಜೆಹಾಕಿ ಅಂದೆ. ಆ ಸಂದರ್ಭದಲ್ಲಿ ನನ್ನ ತಂದೆ ನನಗೆ ಹೇಳಿದ ಮಾತು
“ದೇವರ ಸೇವೆಗೆ ರಜೆ ಹಾಕಬಾರದು” ತಂದೆ ಹೇಳಿದ ಅನುಭವದ ಮಾತು ಸತ್ಯ ಅಲ್ಲವೆ.









ಬುಧವಾರ, ಫೆಬ್ರವರಿ 29, 2012

ಇದು ಯೇಸು ಕ್ರಿಸ್ತನನಿಗೆ ಮಾಡಿದ ಅಪಮಾನ ಅಲ್ಲವೆ. ಇದು ೧೧ ನೆಯ ಶತಮಾನದಲ್ಲಿ ರಚಿಸಲಾದ ಯೇಸು ಕ್ರಿಸ್ತನ ಕಾಲ್ಪನಿಕ ಚಿತ್ರ. ಇದು ಯೇಸು ಕ್ರಿಸ್ತನ ನಿಜವಾದ ಮುಖವಲ್ಲ. ಬೈಬಲ್‍ನಲ್ಲಿ ಈ



ಇದು ೧೧ ನೆಯ ಶತಮಾನದಲ್ಲಿ ರಚಿಸಲಾದ ಯೇಸು ಕ್ರಿಸ್ತನ ಕಾಲ್ಪನಿಕ ಚಿತ್ರ. ಇದು ಯೇಸು ಕ್ರಿಸ್ತನ ನಿಜವಾದ ಮುಖವಲ್ಲ. ಬೈಬಲ್‍ನಲ್ಲಿ ಈ ಚಿತ್ರಕೆ ಯಾವ ಆಧಾರವು ಇಲ್ಲ. ಆದ್ರೆ ಇದನ್ನೇ ಬಹಳ ಜನ ಮನೆಗಳಲ್ಲಿ ಗೋಡೆಗೆ ಹಾಕಿ ಕೊಂಡು ಆರಾಧನೆ ಮಾಡುತ್ತಾರಲ್ಲ. ಇದು ಯೇಸು ಕ್ರಿಸ್ತನನಿಗೆ ಮಾಡಿದ ಅಪಮಾನ ಅಲ್ಲವೆ. ನಿನಗೆ ಆಕಾಶದಲ್ಲಾಗಲಿ ಭೂಮಿಯಲ್ಲಾಗಲಿ ಭೂಮಿಯ ಕೆಳಗಿರುವ ನೀರುಗಳಲ್ಲಾಗಲಿ ಯಾವದರ ವಿಗ್ರಹವನ್ನಾಗಲಿ ರೂಪವನ್ನಾಗಲಿ ನೀನು ಮಾಡಿಕೊಳ್ಳ ಬಾರದು. ನೀನು ಅವುಗಳಿಗೆ ಅಡ್ಡಬೀಳ ಬಾರದು. ಎಂದು ಬೈಬಲ್‍ನಲ್ಲಿಯೇ ಹೇಳಿರುವಾಗ ಇದಕಿಂತ ಆಧಾರ ಇನ್ನೇನು ಬೇಕು. ಮೂಢನಂಬಿಕೆಗಳು ಸರಿಯಲ್ಲ. ಅವು ದೇವರಿಂದ ನಮ್ಮನು ದೂರ ಮಾಡುತ್ತವೆ. ಯಾರೋ ಹೇಳಿದ್ದು ನಂಬಬೇಡಿ. ಬೈಬಲ್‍ನ ಓದಿ ಅದರಂತೆಯೇ ನಂಬಿ ಬದುಕೋಣ.



ಶುಕ್ರವಾರ, ಫೆಬ್ರವರಿ 17, 2012

ಬಹಳ ಜನ ಕ್ರೈಸ್ತ ಸಮಾಜದವರು ವಿಶೇಷವಾಗಿ ಪಾದ್ರಿಗಳು ಈ ದೇವರ ವಾಕ್ಯದಂತೆ ನಡೆದುಕೊಳ್ಳುತ್ತಿಲ್ಲಾ? (ಎಲ್ಲರೂ ಅಲ್ಲ) ಯಾಕೆ ಏನಾಗಿದೆ ನಮ್ಮ ಜನರಿಗೆ “ ನಿನಗೆ ಆಕಾಶದಲ್ಲಾಗಲಿ ಭೂಮಿಯಲ್

ಬಹಳ ಜನ ಕ್ರೈಸ್ತ ಸಮಾಜದವರು ವಿಶೇಷವಾಗಿ ಪಾದ್ರಿಗಳು ಈ ದೇವರ ವಾಕ್ಯದಂತೆ ನಡೆದುಕೊಳ್ಳುತ್ತಿಲ್ಲಾ? (ಎಲ್ಲರೂ ಅಲ್ಲ) ಯಾಕೆ ಏನಾಗಿದೆ ನಮ್ಮ ಜನರಿಗೆ “ ನಿನಗೆ ಆಕಾಶದಲ್ಲಾಗಲಿ ಭೂಮಿಯಲ್ಲಾಗಲಿ ಭೂಮಿಯ ಕೆಳಗಿರುವ ನೀರುಗಳಲ್ಲಾಗಲಿ ಯಾವದರ ವಿಗ್ರಹವನ್ನಾಗಲಿ ರೂಪವನ್ನಾಗಲಿ ನೀನು ಮಾಡಿಕೊಳ್ಳ ಬಾರದು. ನೀನು ಅವುಗಳಿಗೆ ಅಡ್ಡಬೀಳ ಬಾರದು. ಹೀಗೆ ಸತ್ಯವೇದದಲ್ಲಿ ಬರೆಯಲಾಗಿದೆ. ಆದರೂ ಯಾಕೆ? ಅಲ್ಲಿ ಹೇಳಿದಂತೆ ನಡೆದುಕೊಳ್ಳುತ್ತಿಲ್ಲ. ಒಂದೇ ಒಂದು ಸಾರೀ ಯೋಚಿಸಿ. ಸತ್ಯವೇದ ಓದುವ ಹವ್ಯಾಸ ಬೆಳೆಸಿಕೊಳ್ಳಿ ಒಂದು ದಿನ ಸತ್ಯ ಗೊತ್ತಾಗುತ್ತದೆ. ಇದು ಟೀಕೆ ಅಲ್ಲ ತಿದ್ದುವಿಕೆ.








ಭಾನುವಾರ, ಜನವರಿ 22, 2012

ಒಂದೆ ಒಂದು ಸಾರೀ ಬೆಂಗಳೂರಿನ M G ರೋಡಿನಲ್ಲಿರುವ bible ಸೊಸೈಟಿಗೆ ಬೇಟಿ ಕೊಡಿ.

ಬೆಂಗಳೂರುರಿನ M.G ರೋಡಿನ bible societyಗೆ ಬೇಟಿ ಕೊಡಿ . Bible ನ ದೊಡ್ಡ ಸಂಗ್ರಹವೆ ಅಲ್ಲಿದೆ. ದೇವರ ವಾಕ್ಯ ಸಾರಲು ಅನುಕೂಲವಾಗುವ ಹಲವಾರು ಪುಸ್ತಕಗಳ ಸಂಗ್ರಹವು ಇದೆ. ಕನ್ನಡ ತಮಿಳು ತೆಲುಗು ಹಾಗೂ ಹಲವಾರು ಭಾಷೆಗಳ bible ಗೆ ಸಂಬಂದಪಟ್ಟ ಪುಸ್ತಕಗಳು ಇವೆ. bible society ಮಾಡುತ್ತಿರುವ ಕೆಲಸ ಸುವಾರ್ತೆ ಸೇವೆಗೆ ಬಹಳ ಸಹಾಯಕವಾಗಿದೆ. ಅದರ ಅನುಕೂಲ ನಾವು ಪಡೆಯ ಬೇಕಷ್ಟೇ. ಸುವಾರ್ತೆ ಸಾರಲು ಜಗತ್ತಿನ ಹಲವಾರು ಬಗೆಗಿನ ಯೋಚನಾಧಾರೆಗಳು ನಮಗೆ ಗೊತ್ತಾಗುತ್ತಾ ಹೋಗುತ್ತವೆ bible society ಎಲ್ಲಿ. ಎಸ್ಟೋಸಾರಿ ನಾವು ಸಿನಿಮಾ, ನಾಟಕ,t v, ಅಂತ ಕಾಲಹರಣ ಮಾಡುತ್ತೇವೆ ಆದ್ರೆ ದೇವರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲು ಹೊಗುವುದಿಲ್ಲ. ಸಂಕಟ ಬಂದಾಗ ಮಾತ್ರ ದೇವರ ನೆನಪು ನಮಗೆ, ಹಾಗಾಗುವುದು ಬೇಡ ಸಹೊದರ ಸಹೊದರಿ ದೇವರ ವಾಕ್ಯ ಹೇಳಿದ ಹಾಗೇಯೆ ಸುವಾರ್ತೆ ಸೇವೆ ಮಾಡುವತ್ತ ಗಮನ ಹರಿಸಿ ದೇವರ ಕೃಪೆಗೆ ಪಾತ್ರರಾಗೋಣ.























ಗುರುವಾರ, ಜನವರಿ 12, 2012

ಸುವಾರ್ತೆ ಸಮಾದಾನ ಕೊಟ್ಟಿದೆ. ಜೀವನದ ಬಗ್ಗೆ ಆಸಕ್ತಿ ಮೂಡಿಸಿದೆ. ಸಾಕಲ್ಲವೇ ಬದುಕು ಚಿಗುರಲು.





ಹೆಸರು ದೇವದಾನ ದೊಡ್ಡಮನಿ ಜೀವನ ಏರಿಳಿತಗಳಿಂದ ಹದಗೆಟ್ಟು ಹೋದಾಗ ನಾನು ಮೊರೆ ಹೋಗಿದ್ದು ಸತ್ಯವೇದ ("Bible") ಓದುವ ಹವ್ಯಾಸಕ್ಕೆ . ಎಂಟು ಬಾರಿ ಸತ್ಯವೇದ ಓದಿದ ಹೆಮ್ಮೆ ನನಗೆ . ಪ್ರತಿ ದಿನ ಬೆಳಿಗ್ಗೆ ಮತ್ತು ರಾತ್ರಿ ಓದುವ ಹವ್ಯಾಸ ರೂಡಿಸಿಕೊಂಡಿರುವೆ. ಸತ್ಯವೇದದ ಕಟು ಸತ್ಯಗಳು ಗೊತ್ತಾಗುತ್ತಿವೆ. ಸಾದ್ಯವಾದಷ್ಟು ಜನರಿಗೆ ಸುವಾರ್ತೆ ಹೇಳಬೇಕೆಂದು ಮನಸು ಹಾತೊರೆಯುತ್ತಿದೆ. ಸೂಕ್ಷ್ಮವಾಗಿ ಕಾಲಕ್ಕೆ ತಕ್ಕಂತೆ ಸತ್ಯವೇದದ ಸುವಾರ್ತೆಯನ್ನು ಸಾರುತ್ತಿರುವೆ ಮತ್ತು ಅದರಂತೆಯೇ ಬದುಕಲು ಪ್ರಯತ್ನ ನಡೆಸಿರುವೆ.
ಬದುಕು ಕಲಿಸಿದ ಪಾಠ, ಇಲ್ಲಿಗೆ ತಂದು ನಿಲ್ಲಿಸಿದೆ, ಒಂದೊಂದು ಸಾರೀ ನನಗೆ ನಾನೇ ಹೆಮ್ಮೆ ಅನಿಸಿದೆ. ಸುವಾರ್ತೆ ಸಮಾದಾನ ಕೊಟ್ಟಿದೆ. ಜೀವನದ ಬಗ್ಗೆ ಆಸಕ್ತಿ ಮೂಡಿಸಿದೆ. ಸಾಕಲ್ಲವೇ ಬದುಕು ಚಿಗುರಲು.
Matthew ಬರೆದ ಸುವಾರ್ತೆ: ಆದ್ದರಿಂದ ಯೇಸು ಅವರ ಬಳಿಗೆ ಬಂದು, “ಪರಲೋಕದ ಮತ್ತು ಈ ಲೋಕದ ಅಧಿಕಾರವೆಲ್ಲವನ್ನು ನನಗೆ ಕೊಡಲಾಗಿದೆ. ಆದ್ದರಿಂದ ನೀವು ಹೋಗಿ, ಲೋಕದಲ್ಲಿರುವ ಜನರೆಲ್ಲರನ್ನು ನನ್ನ ಶಿಷ್ಯರನ್ನಾಗಿ ಮಾಡಿರಿ. ತಂದೆಯ, ಮಗನ ಮತ್ತು ಪವಿತ್ರಾತ್ಮನ ಹೆಸರಿನಲ್ಲಿ ಅವರಿಗೆಲ್ಲ ದೀಕ್ಷಾಸ್ನಾನ ಮಾಡಿಸಿ. ನಾನು ನಿಮಗೆ ಆಜ್ಞಾಪಿಸಿದವುಗಳಿಗೆಲ್ಲಾ ವಿಧೇಯರಾಗುವಂತೆ ಜನರಿಗೆ ಉಪದೇಶಿಸಿ, ಲೋಕಾಂತ್ಯದವರೆಗೂ ಸದಾಕಾಲ ನಾನು ನಿಮ್ಮೊಂದಿಗಿರುತ್ತೇನೆ” ಎಂದು ಹೇಳಿದನು.
Mark ಬರೆದ ಸುವಾರ್ತೆ: ಯೇಸು ಶಿಷ್ಯರಿಗೆ, “ಪ್ರಪಂಚದ ಎಲ್ಲಾ ಕಡೆಗೆ ಹೋಗಿರಿ. ಪ್ರತಿಯೊಬ್ಬನಿಗೂ ಸುವಾರ್ತೆಯನ್ನು ಹೇಳಿರಿ. ನಂಬಿಕೆಯಿಟ್ಟು, ದೀಕ್ಷಾಸ್ನಾನ ಮಾಡಿಸಿಕೊಳ್ಳುವವನು ರಕ್ಷಣೆಹೊಂದುವನು. ಆದರೆ ನಂಬದವನು ಅಪರಾಧಿ ಎಂಬ ನಿರ್ಣಯ ಹೊಂದುವನು. ನಂಬುವವರಾದರೋ ಅದ್ಭುತಕಾರ್ಯಗಳನ್ನು ಮಾಡುವರು. ಅವರು ನನ್ನ ಹೆಸರಿನ ಮೂಲಕ ದೆವ್ವಗಳನ್ನು ಬಿಡಿಸುವರು. ತಾವೆಂದೂ ಕಲಿತಿಲ್ಲದ ಭಾಷೆಗಳಲ್ಲಿ ಮಾತನಾಡುವರು. ಅವರು ಹಾವುಗಳನ್ನು ಹಿಡಿದುಕೊಂಡರೂ ಅವು ಅವರನ್ನು ಕಚ್ಚುವುದಿಲ್ಲ. ವಿಷಕುಡಿದರೂ ಅವರಿಗೆ ಯಾವ ತೊಂದರೆಯೂ ಆಗುವುದಿಲ್ಲ. ಅವರು ಮುಟ್ಟಿದರೆ ರೋಗಿಗಳು ಗುಣಹೊಂದುವರು” ಎಂದು ಹೇಳಿದನು