ಸೋಮವಾರ, ಫೆಬ್ರವರಿ 11, 2013

ರಾಜೀನಾಮೆ ಪ್ರಕಟಿಸಿದ ಕ್ಯಾಥೊಲಿಕ್ ಕ್ರೈಸ್ತರ ಪರಮಗುರು ಪೋಪ್,


ಮ್, ಫೆ.11: ಕ್ಯಾಥೊಲಿಕ್  ಕ್ರೈಸ್ತರ ಪರಮಗುರು ಪೋಪ್ ಬೆನೆಡಿಟ್ಕ್ XVI ಅವರು ಫೆಬ್ರವರಿ ತಿಂಗಳ ಅಂತ್ಯಕ್ಕೆ ತನ್ನ ಹುದ್ದೆ ತ್ಯಜಿಸಲಿದ್ದಾರೆ ಎಂದು ರೋಮ್ ಪೋಪ್ ಕಚೇರಿ ಸೋಮವಾರ(ಫೆ.11) ಪ್ರಕಟಿಸಿದೆ. ಪೋಪ್ ಹುದ್ದೆ ತ್ಯಜಿಸುವ ಬಗ್ಗೆ ಸ್ವತಃ ಪೋಪ್ ಬೆನೆಡಿಕ್ಟ್ ಅವರು ಘೋಷಣಾ ಪತ್ರ ಹೊರಡಿಸಿದ್ದಾರೆ. ಅನಾರೋಗ್ಯದ ಕಾರಣ ಹುದ್ದೆಯಲ್ಲಿ ಮುಂದುವರೆಯಲು ಸಾಧ್ಯವಾಗುತ್ತಿಲ್ಲ ಎಂದು ಪೋಪ್ ಹೇಳಿದ್ದಾರೆ. ಹೊಸ ಪೋಪ್ ಹುಡುಕಾಟದಲ್ಲಿ ತೊಡಗಿರುವ ವ್ಯಾಟಿಕನ್ ಸಿಟಿ, ಆದಷ್ಟು ಬೇಗ ಹೊಸ ಪೋಪ್ ಆಯ್ಕೆ ಮಾಡಲಾಗುವುದು ಎಂದಿದೆ. ಬವಾರಿಯಾ ಮೂಲದ ಕಾರ್ಡಿನಲ್ ಜೋಸೆಫ್ ಅಲೋಸಿಯಸ್ ರಾಜ್ನಿಗರ್ ಅವರು 2005, ಏಪ್ರಿಲ್ 19 ರಂದು ಪೋಪ್ ಹುದ್ದೆಗೇರಿದ್ದರು. ಪೋಪ್ ನೀಡಿರುವ ಪ್ರಕಟನೆಯ ಪೂರ್ಣ ಪಾಠ ಇಲ್ಲಿದೆ ಹಾಗೂ ಆಡಿಯೋ ರೇಡಿಯೋ ವ್ಯಾಟಿಕನ್ ನಲ್ಲಿ ಲಭ್ಯವಿದೆ.. ಆಸಕ್ತರು ಕೇಳಿ, ಪೋಪ್ ವಿವಾದಗಳ ಹಿನ್ನೋಟ: ಕೃತಕ ಗರ್ಭಧಾರಣೆಗೆ ಪೋಪ್ ರೆಡ್ ಸಿಗ್ನಲ್: ಕೃತಕ ಗರ್ಭಧಾರಣೆ ಮೂಲಕ ಹಣ ಮಾಡುವ ಪ್ರವೃತ್ತಿಯನ್ನು ಕೈ ಬಿಡಬೇಕು. ಇದರಿಂದ ಸಿಗುವ ಸುಲಭದ ಗಳಿಕೆ ಪಾಪದ ಸಾಲಿಗೆ ಸೇರುತ್ತದೆ ಎಂದು ಪೋಪ್ ಹೇಳಿದ್ದರು. ರೋಮ್ ಚರ್ಚ್ ಸಿಬ್ಬಂದಿಗಳು ವೀರ್ಯದಾನ ಮಾಡುವುದನ್ನು ನಿಷೇಧಿಸಲಾಗಿತ್ತು. ಆದರೆ, ಬಂಜೆತನ ಹೋಗಲಾಡಿಸಲು ನಡೆಯುತ್ತಿರುವ ಸಂಶೋಧನೆಗೆ ವ್ಯಾಟಿಕಾನ್ ಚರ್ಚ್ ಬೆಂಬಲ ವ್ಯಕ್ತಪಡಿಸಿದ್ದು ವಿರೋಧಾಭಾಸವಾಗಿತ್ತು. ಕ್ಯಾಥೊಲಿಕ್ ಕ್ರೈಸ್ತರ  ಪರಮ ಗುರು ಪೋಪ್ ಬೆನೆಡಿಕ್ಟ್ XVI ಹಾಗೂ ಈಜಿಪ್ಟಿನ ಇಮಾಮ್ ತುಟಿಗೆ ತುಟಿ ಒತ್ತಿರುವ ಚಿತ್ರವನ್ನು ಬೆನೆಟ್ಟನ್ ಸಂಸ್ಥೆ ದುರ್ಬಳಕೆ ಮಾಡಿಕೊಂಡಿದ್ದು ದೊಡ್ಡ ಸುದ್ದಿಯಾಗಿತ್ತು. 2009ರಲ್ಲಿ ಆಫ್ರಿಕಾ ಭೇಟಿ ವೇಳೆ, ಏಡ್ಸ್ ಸಮಸ್ಯೆಗೆ ಕಾಂಡೊಮ್ ಪರಿಹಾರವಲ್ಲ. ಆದರೆ ಅದು ಪ್ರತಿಕೂಲ ಸ್ಥಿತಿಯನ್ನು ಹೆಚ್ಚಿಸುತ್ತದೆ ಎಂಬ ಬೆನೆಡಿಕ್ಟ್ ಹೇಳಿಕೆಗೆ ಯೂರೋಪಿಯನ್ ದೇಶಗಳು ಸೇರಿದಂತೆ ಅನೇಕ ಅಂತಾರಾಷ್ಟ್ರೀಯ ಸಂಘಟನೆಗಳು ಹಾಗೂ ವಿಜ್ಞಾನಿಗಳಿಂದ ತೀವ್ರ ವಿರೋಧ ವ್ಯಕ್ತಗೊಂಡಿತ್ತು. ಅಮೆರಿಕದ ಕ್ಯಾಥೊಲಿಕ್ ಮಹಿಳಾ ಪಾದ್ರಿಯೊಬ್ಬರು ಬರೆದಿರುವ ಪುಸ್ತಕವು ಹಸ್ತಮೈಥುನ, ಸಲಿಂಗಕಾಮ ಮತ್ತು ವಿಚ್ಛೇಧನದಂತಹ ವಿಷಯದ ಬಗ್ಗೆ ಪೋಪ್ ಕಿಡಿಕಾರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ