ಭಾನುವಾರ, ಮಾರ್ಚ್ 17, 2013

ರೋಮನ್ ಕ್ಯಾಥೋಲಿಕ್ ಕ್ರೈಸ್ತರ ಧರ್ಮಗುರು ಪೋಪ್ .


ರೋಮನ್ ಕ್ಯಾಥೋಲಿಕ್ ಕ್ರೈಸ್ತರ ಧರ್ಮಗುರು ಪೋಪ್ ಬೆನೆಡಿಕ್ಟ್ XVI ಅವರ ಉತ್ತರಾಧಿಕಾರಿಯಾಗಿ ಅರ್ಜೆಂಟಿನಾದ ಜಾರ್ಗ್ ಮಾರಿಯೊ ಬೆರ್ಗೋಗ್ಲಿಯೋ  ಮಾರಿಯೊ ಬೆರ್ಗೋಗ್ಲಿಯೋ (76) ಅವರು ಆಯ್ಕೆಯಾಗಿದ್ದಾರೆ. ವ್ಯಾಟಿಕನ್ ಕ್ರೈಸ್ತರು ಮತ್ತು ವಿಶ್ವದಾದ್ಯಂತ ಇರುವ ರೋಮನ್ ಕ್ಯಾಥೋಲಿಕ್  ಕ್ರೈಸ್ತ ಧರ್ಮೀಯರು 266ನೇ ಧರ್ಮಗುರುವನ್ನು ಸ್ವಾಗತಿಸಿದ್ದಾರೆ.13ನೇ ಶತಮಾನದಲ್ಲಿ ಬಡತನದಲ್ಲಿಯೇ ಬದುಕಿದ ಇಟಲಿಯ ಧರ್ಮಗುರು ಫ್ರಾನ್ಸಿಸ್ ಅವರ ಹೆಸರನ್ನು ಜಾರ್ಗ್ ಅವರು ಇಟ್ಟುಕೊಂಡಿದ್ದಾರೆ. ಪೋಪ್ ಫ್ರಾನ್ಸಿಸ್ ಅವರು ಮೊದಲ ಅಮೆರಿಕನ್ ರೋಮನ್ ಕ್ಯಾಥೋಲಿಕ್ ಧರ್ಮಗುರುವಾಗಿದ್ರು, ಒಂದು ಶತಮಾನದ ಇತಿಹಾಸ ಗಮನಿಸಿದರೆ ಯುರೋಪ್ನಿಂದ ಹೊರಗಿರುವ ಮೊದಲ ಧರ್ಮಗುರು. ಸಲಿಂಗಿಗಳ ಮದುವೆ, ಗರ್ಭಪಾತ ಮತ್ತು ಗರ್ಭನಿರೋಧಕ ಬಳಕೆಯನ್ನು ವಿರೋಧಿಸುವುದಾಗಿ ಪೋಪ್ ಫ್ರಾನ್ಸಿಸ್ ಹೇಳಿದ್ದಾರೆ. ಸಲಿಂಗಿಗಳ ಮದುವೆ ದೈವೇಚ್ಛೆಯ ಮೇಲೆ ನಡೆಸುವ ವಿಧ್ವಂಸಕ ಕೃತ್ಯ ಎಂದು ಅವರು ಹೇಳಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ