ಭಾನುವಾರ, ಆಗಸ್ಟ್ 18, 2013

ಚರ್ಚ್ ಸಂಗೀತ ಕಲಿಕೆಗೆ ಅಕಾಡೆಮಿ.

ಪಾಶ್ಚಿಮಾತ್ಯ ಸಂಗೀತ ಎಂದ ಕೂಡಲೇ ಅಬ್ಬರದ ವಾದ್ಯಗಳು, ಕಿರುಚಾಡುತ್ತಾ ಮೈಕುಣಿಸುವ ಕಲಾವಿದರ ಚಿತ್ರ ಕಣ್ಮುಂದೆ ಬರುತ್ತದೆ. ಆದರೆ ಅಬ್ಬರದ ಸಂಗೀತವಿಲ್ಲದೇ ಕೇವಲ ವಾದ್ಯಗಳ ಮೂಲಕ ನಡೆಯುವ ಗೋಷ್ಠಿಗಳೂ ಇವೆ. ಅದಕ್ಕೊಂದು ಉದಾಹರಣೆ ಚರ್ಚ್ ಸಂಗೀತ. ಚರ್ಚ್ ಸಂಗೀತ ಎಂದ ಕೂಡಲೇ ಅಬ್ಬರವಿಲ್ಲದ ಮಧುರವಾದ ಸಂಗೀತದ ರಿಂಗಣ ಕೇಳಿಸುತ್ತದೆ. ಚರ್ಚ್ಗಳಿಗೂ ಸಂಗೀತಕ್ಕೂ ಮಧುರವಾದ ನಂಟಿದೆ. ಪಾಶ್ಚಾತ್ಯ ದೇಶಗಳ ಚರ್ಚ್ಗಳಲ್ಲಿ ಸಂಗೀತ ನುಡಿಸುವ ತಂಡವೇ ಇರುತ್ತದೆ. ಅದರಲ್ಲೂ ಚರ್ಚ್ಗಳಲ್ಲಿ ಪಿಯಾನೋಗೆ ಮುಖ್ಯ ಸ್ಥಾನ ನೀಡಲಾಗಿದೆ. ಒಂದು ಗಿಟಾರ್, ಕೀಬೋರ್ಡ್ ಇಷ್ಟಿದ್ದರೆ ಸಾಕು. ಕ್ರೈಸ್ತರ ಶಾಂತಿಪ್ರಿಯತೆ ಅವರ ಸಂಗೀತದಲ್ಲಿಯೇ ವ್ಯಕ್ತವಾಗುತ್ತದೆ. ದುಃಖಕ್ಕೊಂದು, ಸಂತೋಷಕ್ಕೊಂದು ಸಂಗೀತದ ಮುನ್ನುಡಿ ಇದ್ದೇ ಇರುತ್ತದೆ. ಎಲ್ಲ ಭಾವನೆಗಳನ್ನೂ ಸಂಗೀತದ ಮೂಲಕ ದಾಟಿಸುವ ಕ್ರಿಯೆಯ ಹಿಂದೆ ಪರಿಶ್ರಮವೂ ಇದೆ. ಇಲ್ಲಿನ ಎಲ್ಲ ಚರ್ಚ್ಗಳಲ್ಲಿ ಸಂಗೀತಗಾರರ ತಂಡ ಇಲ್ಲದೇ ಇದ್ದರೂ ಒಂದಿಬ್ಬರು ಸಂಗೀತಗಾರರು ಇದ್ದೇ ಇರುತ್ತಾರೆ. ಪ್ರತಿ ಭಾನುವಾರದ ಸಾಮೂಹಿಕ ಪ್ರಾರ್ಥನೆಗೆ ಸಂಗೀತದ ಸಾರಥ್ಯವಿರುತ್ತದೆ. ಕ್ರಿಸ್ಮಸ್ ಹಬ್ಬದ ದಿನಗಳಲ್ಲಿ, ಹೊಸ ವರ್ಷದ ಸಂಭ್ರಮಾಚರಣೆಗೆ ವಿಶೇಷ ಸಂಗೀತದ ಸ್ಪರ್ಶ ಇರುತ್ತದೆ. ಹೀಗೆ ಸಂಗೀತದ ಮೂಲಕ ಪ್ರಾರ್ಥನೆ ಕ್ರೈಸ್ತರ ವಿಶೇಷತೆ. ನಮ್ಮಲ್ಲಿ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ, ಸುಗಮ ಸಂಗೀತ, ಭಜನೆ, ಗಝಲ್ಗಳಂತೆ ಚರ್ಚ್ ಸಂಗೀತವನ್ನು ಒಂದು ಸಂಗೀತ ಪ್ರಕಾರ ಎಂದು ಪರಿಗಣಿಸಿದ ಹಾಗಿಲ್ಲ. ಪಾಶ್ಚಿಮಾತ್ಯ ಸಂಗೀತ ಕಲಿಸುವ ಶಾಲೆಗಳು ವಿರಳ. ಆದರೆ ಪ್ರಾರ್ಥನೆಗೆಂದು ಚರ್ಚ್ಗೆ ಹೋಗುವ ಯುವಕರ ಬೆನ್ನಲ್ಲೊಂದು ಗಿಟಾರ್ ನೇತಾಡುತ್ತಿರುತ್ತದೆ. ಹೀಗೆ ಯುವಕರಲ್ಲಿ ಸಂಗೀತ ಪ್ರೀತಿ ಜೀವಂತವಾಗಿರಲು ಶಾಸ್ತ್ರೀಯವಾಗಿ ಚರ್ಚ್ ಸಂಗೀತ ಮತ್ತು ಪಾಶ್ಚಿಮಾತ್ಯ ವಾದ್ಯಗಳನ್ನು ಕಲಿಸುವ ಶಾಲೆಯೊಂದು ಎಂ.ಜಿ.ರಸ್ತೆಯ ಸೇಂಟ್ ಮಾರ್ಕ್ಸ್ ಚರ್ಚ್ನಲ್ಲಿದೆ. 1990ರಲ್ಲಿ ಪ್ರೊ.ಡೇವಿಡ್ ಸೆಬಾಸ್ಟಿನ್ ಅವರ ನೇತೃತ್ವದಲ್ಲಿ ಚರ್ಚ್ ಮ್ಯೂಸಿಕ್ ಕಲಿಕೆಗೆಂದುಸೇಂಟ್ ಮಾರ್ಕ್ಸ್ ಮ್ಯೂಸಿಕ್ ಅಕಾಡೆಮಿಆರಂಭವಾಯಿತು. ಇದು ಲಂಡನ್ನರಾಯಲ್ ಸ್ಕೂಲ್ ಆಫ್ ಚರ್ಚ್ ಮ್ಯೂಸಿಕ್ನಿಂದ ಪ್ರಮಾಣೀಕೃತಗೊಂಡಿದೆ. ಇದರ ಜೊತೆಗೆ ಸರ್ಟಿಫಿಕೇಟ್ ಕೋರ್ಸ್ಗಳನ್ನು ಕೂಡ ನಡೆಸುತ್ತಿದೆ. ಯುಕೆ ಎಬಿಆರ್ಎಸ್ಎಂ, ಟ್ರಿನಿಟಿ ಗೈಡ್ಹಾಲ್, ಎಲ್ಎಸ್ಎಂ, ಎಸ್ಎಂಎಂಎ ಸರ್ಟಿಫಿಕೇಟ್ ಕೋರ್ಸುಗಳಿಗೆ ಹಾಜರಾಗಬಹುದು. ಆದರೆ ಇದು ಕಡ್ಡಾಯವಲ್ಲ. ಅದು ಅವರವರ ಆಯ್ಕೆಯಾಗಿದೆ. ವಾರಕ್ಕೆ ಒಂದು ಗಂಟೆಯ ತರಗತಿ ಇರುತ್ತದೆ. ತಿಂಗಳಿಗೆ ನಾಲ್ಕು ಕ್ಲಾಸುಗಳು. ಇದರಲ್ಲಿ ಶೇ 75ರಷ್ಟು ಹಾಜರಾತಿ ಕಡ್ಡಾಯ. .– ಫಾದರ್ ಎಸ್.ಕೆ. ದಾಸ್, ಸೇಂಟ್ ಮಾರ್ಕ್ ಮ್ಯೂಸಿಕ್ ಅಕಾಡೆಮಿ ನಿರ್ದೇಶಕ(ಮಾಹಿತಿಗೆ: 080 2221 4021, 98455 59658)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ