ಗುರುವಾರ, ಸೆಪ್ಟೆಂಬರ್ 5, 2013

ಚರ್ಚ್ ದಾಳಿ: ಕೊನೆಗೂ ಆರೋಪಿ ಸಿಕ್ಕಿ ಬಿದ್ದ.

ಬೆಂಗಳೂರು, ಸೆ. 5: ನಗರದ ಸುತ್ತಮುತ್ತಲಿನ ಚರ್ಚ್ ಹಾಗೂ ಇನ್ನಿತರ ಕ್ರೈಸ್ತ ಧಾರ್ಮಿಕ ಮಂದಿರಗಳ ಮೇಲೆ ದಾಳಿ ನಡೆಸಿದ ಅರೋಪಿಯನ್ನು ಸುಮಾರು ಐದು ವರ್ಷಗಳ ನಂತರ ಕೊನೆಗೂ ಬಂಧಿಸಲಾಗಿದೆ. ಬೆಂಗಳೂರಿನ ಹೊರ ವಲಯದ ಅತ್ತಿಬೆಲೆಯ ಯಡವನಹಳ್ಳಿ, ಹೆಬ್ಬಗೋಡಿಯ ಹುಸ್ಕೂರ್ ಗೇಟ್ ಬಳಿಯ ಕ್ರೈಸ್ತರ ಪ್ರಾರ್ಥನಾ ಮಂದಿರ ಸೇರಿ ನಾಲ್ಕು ಚರ್ಚ್ ಗಳ ಮೇಲೆ ದಾಳಿ ನಡೆಸಿದ ಪ್ರಕರಣ ಸಂಬಂಧ ನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಡೆಂಕಣಿಕೋಟೆ ತಾಲೂಕಿನ ಮದಗೊಂಡನಪಲ್ಲಿಯ ನಿವಾಸಿ ಸಜ್ಜನ್ ಕುಮಾರ್ ಅಲಿಯಾಸ್ ಬಾಬು (33) ಎಂದು ಗುರುತಿಸಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ