ಸೆ.22
: ಪಾಕಿಸ್ತಾನದ ವಾಯುವ್ಯ ಪ್ರಾಂತ್ಯದ ಪೇಶಾವರದ
ಚರ್ಚ್ವೊಂದರ ಮೇಲೆ ಭಾನುವಾರ
ನಡೆದ ಬಾಂಬ್ ದಾಳಿಯಲ್ಲಿ 53 ಜನರು
ಸಾವನ್ನಪ್ಪಿದ್ದಾರೆ. 30ಕ್ಕೂ ಅಧಿಕ ಜನರು
ಘಟನೆಯಲ್ಲಿ ಗಾಯಗೊಂಡಿದ್ದಾರೆ.ಪೇಶಾವರ ನಗರದ ತುಂಬಾ
ಇಕ್ಕಟ್ಟಾದ ಸ್ಥಳದಲ್ಲಿ ಈ ಚರ್ಚ್ ಇದೆ.
ಭಾನುವಾರ ಕ್ರೈಸ್ತ ಸಮುದಾಯದವರು ಪ್ರಾರ್ಥನೆ
ಮುಗಿಸಿ ಹೊರಗೆ ಆಗಮಿಸುವ ವೇಳೆಗೆ
ಬಾಂಬ್ ಸ್ಪೋಟಿಸಲಾಗಿದೆ. ಮೃತರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು ಎಂದು
ಪಾಕ್ ಮಾಧ್ಯಮಗಳು ವರದಿ ಮಾಡಿವೆ.ಘಟನೆಯಿಂದಾಗಿ
30ಕ್ಕೂ ಅಧಿಕ ಜನರು ಗಾಯಗೊಂಡಿದ್ದು,
ಅವರನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಚರ್ಚ್ ನಲ್ಲಿ ಭಾನುವಾರದ ಪ್ರಾರ್ಥನೆಗಾಗಿ
500ಕ್ಕೂ ಅಧಿಕ ಜನರು ಸೇರಿದ್ದರು
ಎಂದು ತಿಳಿದು ಬಂದಿದೆ.ಚರ್ಚ್
ನಿಂದ ಪ್ರಾರ್ಥನೆ ಮುಗಿಸಿಕೊಂಡು ಜನರು ಹೊರಬರುತ್ತಿದ್ದ ಸಂದರ್ಭ
ಆತ್ಮಾಹುತಿ ಬಾಂಬರ್ ತನ್ನನ್ನು ತಾನು
ಸ್ಫೋಟಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ಹೆಚ್ಚಿನ
ಸಂಖ್ಯೆಯ ಕ್ರೈಸ್ತರು ವಾಸಿಸುತ್ತಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ