ಭಾನುವಾರ, ಸೆಪ್ಟೆಂಬರ್ 22, 2013

ಪಾಕ್ನಲ್ಲಿ ಉಗ್ರರ ಅಟ್ಟಹಾಸ ಚರ್ಚ್ ಹೊರಗೆ ಬಾಂಬ್ ಸ್ಫೋಟ.


ಸೆ.22 : ಪಾಕಿಸ್ತಾನದ ವಾಯುವ್ಯ ಪ್ರಾಂತ್ಯದ ಪೇಶಾವರದ ಚರ್ಚ್ವೊಂದರ ಮೇಲೆ ಭಾನುವಾರ ನಡೆದ ಬಾಂಬ್ ದಾಳಿಯಲ್ಲಿ 53 ಜನರು ಸಾವನ್ನಪ್ಪಿದ್ದಾರೆ. 30ಕ್ಕೂ ಅಧಿಕ ಜನರು ಘಟನೆಯಲ್ಲಿ ಗಾಯಗೊಂಡಿದ್ದಾರೆ.ಪೇಶಾವರ ನಗರದ ತುಂಬಾ ಇಕ್ಕಟ್ಟಾದ ಸ್ಥಳದಲ್ಲಿ ಚರ್ಚ್ ಇದೆ. ಭಾನುವಾರ ಕ್ರೈಸ್ತ ಸಮುದಾಯದವರು ಪ್ರಾರ್ಥನೆ ಮುಗಿಸಿ ಹೊರಗೆ ಆಗಮಿಸುವ ವೇಳೆಗೆ ಬಾಂಬ್ ಸ್ಪೋಟಿಸಲಾಗಿದೆ. ಮೃತರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.ಘಟನೆಯಿಂದಾಗಿ 30ಕ್ಕೂ ಅಧಿಕ ಜನರು ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಚರ್ಚ್ ನಲ್ಲಿ ಭಾನುವಾರದ ಪ್ರಾರ್ಥನೆಗಾಗಿ 500ಕ್ಕೂ ಅಧಿಕ ಜನರು ಸೇರಿದ್ದರು ಎಂದು ತಿಳಿದು ಬಂದಿದೆ.ಚರ್ಚ್ ನಿಂದ ಪ್ರಾರ್ಥನೆ ಮುಗಿಸಿಕೊಂಡು ಜನರು ಹೊರಬರುತ್ತಿದ್ದ ಸಂದರ್ಭ ಆತ್ಮಾಹುತಿ ಬಾಂಬರ್ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಕ್ರೈಸ್ತರು ವಾಸಿಸುತ್ತಿದ್ದಾರೆ.

ಗುರುವಾರ, ಸೆಪ್ಟೆಂಬರ್ 5, 2013

ಚರ್ಚ್ ದಾಳಿ: ಕೊನೆಗೂ ಆರೋಪಿ ಸಿಕ್ಕಿ ಬಿದ್ದ.

ಬೆಂಗಳೂರು, ಸೆ. 5: ನಗರದ ಸುತ್ತಮುತ್ತಲಿನ ಚರ್ಚ್ ಹಾಗೂ ಇನ್ನಿತರ ಕ್ರೈಸ್ತ ಧಾರ್ಮಿಕ ಮಂದಿರಗಳ ಮೇಲೆ ದಾಳಿ ನಡೆಸಿದ ಅರೋಪಿಯನ್ನು ಸುಮಾರು ಐದು ವರ್ಷಗಳ ನಂತರ ಕೊನೆಗೂ ಬಂಧಿಸಲಾಗಿದೆ. ಬೆಂಗಳೂರಿನ ಹೊರ ವಲಯದ ಅತ್ತಿಬೆಲೆಯ ಯಡವನಹಳ್ಳಿ, ಹೆಬ್ಬಗೋಡಿಯ ಹುಸ್ಕೂರ್ ಗೇಟ್ ಬಳಿಯ ಕ್ರೈಸ್ತರ ಪ್ರಾರ್ಥನಾ ಮಂದಿರ ಸೇರಿ ನಾಲ್ಕು ಚರ್ಚ್ ಗಳ ಮೇಲೆ ದಾಳಿ ನಡೆಸಿದ ಪ್ರಕರಣ ಸಂಬಂಧ ನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಡೆಂಕಣಿಕೋಟೆ ತಾಲೂಕಿನ ಮದಗೊಂಡನಪಲ್ಲಿಯ ನಿವಾಸಿ ಸಜ್ಜನ್ ಕುಮಾರ್ ಅಲಿಯಾಸ್ ಬಾಬು (33) ಎಂದು ಗುರುತಿಸಲಾಗಿದೆ.