ಸೆ.22
: ಪಾಕಿಸ್ತಾನದ ವಾಯುವ್ಯ ಪ್ರಾಂತ್ಯದ ಪೇಶಾವರದ
ಚರ್ಚ್ವೊಂದರ ಮೇಲೆ ಭಾನುವಾರ
ನಡೆದ ಬಾಂಬ್ ದಾಳಿಯಲ್ಲಿ 53 ಜನರು
ಸಾವನ್ನಪ್ಪಿದ್ದಾರೆ. 30ಕ್ಕೂ ಅಧಿಕ ಜನರು
ಘಟನೆಯಲ್ಲಿ ಗಾಯಗೊಂಡಿದ್ದಾರೆ.ಪೇಶಾವರ ನಗರದ ತುಂಬಾ
ಇಕ್ಕಟ್ಟಾದ ಸ್ಥಳದಲ್ಲಿ ಈ ಚರ್ಚ್ ಇದೆ.
ಭಾನುವಾರ ಕ್ರೈಸ್ತ ಸಮುದಾಯದವರು ಪ್ರಾರ್ಥನೆ
ಮುಗಿಸಿ ಹೊರಗೆ ಆಗಮಿಸುವ ವೇಳೆಗೆ
ಬಾಂಬ್ ಸ್ಪೋಟಿಸಲಾಗಿದೆ. ಮೃತರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು ಎಂದು
ಪಾಕ್ ಮಾಧ್ಯಮಗಳು ವರದಿ ಮಾಡಿವೆ.ಘಟನೆಯಿಂದಾಗಿ
30ಕ್ಕೂ ಅಧಿಕ ಜನರು ಗಾಯಗೊಂಡಿದ್ದು,
ಅವರನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಚರ್ಚ್ ನಲ್ಲಿ ಭಾನುವಾರದ ಪ್ರಾರ್ಥನೆಗಾಗಿ
500ಕ್ಕೂ ಅಧಿಕ ಜನರು ಸೇರಿದ್ದರು
ಎಂದು ತಿಳಿದು ಬಂದಿದೆ.ಚರ್ಚ್
ನಿಂದ ಪ್ರಾರ್ಥನೆ ಮುಗಿಸಿಕೊಂಡು ಜನರು ಹೊರಬರುತ್ತಿದ್ದ ಸಂದರ್ಭ
ಆತ್ಮಾಹುತಿ ಬಾಂಬರ್ ತನ್ನನ್ನು ತಾನು
ಸ್ಫೋಟಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ಹೆಚ್ಚಿನ
ಸಂಖ್ಯೆಯ ಕ್ರೈಸ್ತರು ವಾಸಿಸುತ್ತಿದ್ದಾರೆ.
ಭಾನುವಾರ, ಸೆಪ್ಟೆಂಬರ್ 22, 2013
ಗುರುವಾರ, ಸೆಪ್ಟೆಂಬರ್ 5, 2013
ಚರ್ಚ್ ದಾಳಿ: ಕೊನೆಗೂ ಆರೋಪಿ ಸಿಕ್ಕಿ ಬಿದ್ದ.
ಬೆಂಗಳೂರು,
ಸೆ. 5: ನಗರದ ಸುತ್ತಮುತ್ತಲಿನ ಚರ್ಚ್
ಹಾಗೂ ಇನ್ನಿತರ ಕ್ರೈಸ್ತ ಧಾರ್ಮಿಕ
ಮಂದಿರಗಳ ಮೇಲೆ ದಾಳಿ ನಡೆಸಿದ
ಅರೋಪಿಯನ್ನು ಸುಮಾರು ಐದು ವರ್ಷಗಳ
ನಂತರ ಕೊನೆಗೂ ಬಂಧಿಸಲಾಗಿದೆ.
ಬೆಂಗಳೂರಿನ ಹೊರ ವಲಯದ ಅತ್ತಿಬೆಲೆಯ ಯಡವನಹಳ್ಳಿ,
ಹೆಬ್ಬಗೋಡಿಯ ಹುಸ್ಕೂರ್ ಗೇಟ್ ಬಳಿಯ ಕ್ರೈಸ್ತರ
ಪ್ರಾರ್ಥನಾ ಮಂದಿರ ಸೇರಿ ನಾಲ್ಕು
ಚರ್ಚ್ ಗಳ ಮೇಲೆ ದಾಳಿ
ನಡೆಸಿದ ಪ್ರಕರಣ ಸಂಬಂಧ ನಗರ
ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ತಮಿಳುನಾಡಿನ
ಕೃಷ್ಣಗಿರಿ ಜಿಲ್ಲೆಯ ಡೆಂಕಣಿಕೋಟೆ ತಾಲೂಕಿನ
ಮದಗೊಂಡನಪಲ್ಲಿಯ ನಿವಾಸಿ ಸಜ್ಜನ್ ಕುಮಾರ್
ಅಲಿಯಾಸ್ ಬಾಬು (33) ಎಂದು ಗುರುತಿಸಲಾಗಿದೆ.
ಭಾನುವಾರ, ಆಗಸ್ಟ್ 18, 2013
ಚರ್ಚ್ ಸಂಗೀತ ಕಲಿಕೆಗೆ ಅಕಾಡೆಮಿ.
ಪಾಶ್ಚಿಮಾತ್ಯ
ಸಂಗೀತ ಎಂದ ಕೂಡಲೇ ಅಬ್ಬರದ
ವಾದ್ಯಗಳು, ಕಿರುಚಾಡುತ್ತಾ ಮೈಕುಣಿಸುವ ಕಲಾವಿದರ ಚಿತ್ರ ಕಣ್ಮುಂದೆ
ಬರುತ್ತದೆ. ಆದರೆ ಅಬ್ಬರದ ಸಂಗೀತವಿಲ್ಲದೇ
ಕೇವಲ ವಾದ್ಯಗಳ ಮೂಲಕ ನಡೆಯುವ
ಗೋಷ್ಠಿಗಳೂ ಇವೆ. ಅದಕ್ಕೊಂದು ಉದಾಹರಣೆ
ಚರ್ಚ್ ಸಂಗೀತ. ಚರ್ಚ್ ಸಂಗೀತ
ಎಂದ ಕೂಡಲೇ ಅಬ್ಬರವಿಲ್ಲದ ಮಧುರವಾದ
ಸಂಗೀತದ ರಿಂಗಣ ಕೇಳಿಸುತ್ತದೆ.
ಚರ್ಚ್ಗಳಿಗೂ ಸಂಗೀತಕ್ಕೂ
ಮಧುರವಾದ ನಂಟಿದೆ. ಪಾಶ್ಚಾತ್ಯ ದೇಶಗಳ
ಚರ್ಚ್ಗಳಲ್ಲಿ ಸಂಗೀತ ನುಡಿಸುವ ತಂಡವೇ
ಇರುತ್ತದೆ. ಅದರಲ್ಲೂ ಚರ್ಚ್ಗಳಲ್ಲಿ ಪಿಯಾನೋಗೆ
ಮುಖ್ಯ ಸ್ಥಾನ ನೀಡಲಾಗಿದೆ. ಒಂದು
ಗಿಟಾರ್, ಕೀಬೋರ್ಡ್ ಇಷ್ಟಿದ್ದರೆ ಸಾಕು. ಕ್ರೈಸ್ತರ ಶಾಂತಿಪ್ರಿಯತೆ
ಅವರ ಸಂಗೀತದಲ್ಲಿಯೇ ವ್ಯಕ್ತವಾಗುತ್ತದೆ. ದುಃಖಕ್ಕೊಂದು, ಸಂತೋಷಕ್ಕೊಂದು ಸಂಗೀತದ ಮುನ್ನುಡಿ ಇದ್ದೇ
ಇರುತ್ತದೆ. ಎಲ್ಲ ಭಾವನೆಗಳನ್ನೂ ಸಂಗೀತದ
ಮೂಲಕ ದಾಟಿಸುವ ಕ್ರಿಯೆಯ ಹಿಂದೆ
ಪರಿಶ್ರಮವೂ ಇದೆ. ಇಲ್ಲಿನ ಎಲ್ಲ
ಚರ್ಚ್ಗಳಲ್ಲಿ ಸಂಗೀತಗಾರರ ತಂಡ ಇಲ್ಲದೇ ಇದ್ದರೂ
ಒಂದಿಬ್ಬರು ಸಂಗೀತಗಾರರು ಇದ್ದೇ ಇರುತ್ತಾರೆ. ಪ್ರತಿ
ಭಾನುವಾರದ ಸಾಮೂಹಿಕ ಪ್ರಾರ್ಥನೆಗೆ ಸಂಗೀತದ
ಸಾರಥ್ಯವಿರುತ್ತದೆ. ಕ್ರಿಸ್ಮಸ್ ಹಬ್ಬದ ದಿನಗಳಲ್ಲಿ, ಹೊಸ
ವರ್ಷದ ಸಂಭ್ರಮಾಚರಣೆಗೆ ವಿಶೇಷ ಸಂಗೀತದ ಸ್ಪರ್ಶ
ಇರುತ್ತದೆ. ಹೀಗೆ ಸಂಗೀತದ ಮೂಲಕ
ಪ್ರಾರ್ಥನೆ ಕ್ರೈಸ್ತರ ವಿಶೇಷತೆ. ನಮ್ಮಲ್ಲಿ ಶಾಸ್ತ್ರೀಯ
ಸಂಗೀತ, ಹಿಂದೂಸ್ತಾನಿ, ಸುಗಮ ಸಂಗೀತ, ಭಜನೆ,
ಗಝಲ್ಗಳಂತೆ ಚರ್ಚ್ ಸಂಗೀತವನ್ನು ಒಂದು
ಸಂಗೀತ ಪ್ರಕಾರ ಎಂದು ಪರಿಗಣಿಸಿದ
ಹಾಗಿಲ್ಲ. ಪಾಶ್ಚಿಮಾತ್ಯ ಸಂಗೀತ ಕಲಿಸುವ ಶಾಲೆಗಳು
ವಿರಳ. ಆದರೆ ಪ್ರಾರ್ಥನೆಗೆಂದು ಚರ್ಚ್ಗೆ
ಹೋಗುವ ಯುವಕರ ಬೆನ್ನಲ್ಲೊಂದು ಗಿಟಾರ್
ನೇತಾಡುತ್ತಿರುತ್ತದೆ. ಹೀಗೆ ಯುವಕರಲ್ಲಿ ಸಂಗೀತ
ಪ್ರೀತಿ ಜೀವಂತವಾಗಿರಲು ಶಾಸ್ತ್ರೀಯವಾಗಿ ಚರ್ಚ್ ಸಂಗೀತ ಮತ್ತು
ಪಾಶ್ಚಿಮಾತ್ಯ ವಾದ್ಯಗಳನ್ನು ಕಲಿಸುವ ಶಾಲೆಯೊಂದು ಎಂ.ಜಿ.ರಸ್ತೆಯ ಸೇಂಟ್
ಮಾರ್ಕ್ಸ್ ಚರ್ಚ್ನಲ್ಲಿದೆ. 1990ರಲ್ಲಿ ಪ್ರೊ.ಡೇವಿಡ್
ಸೆಬಾಸ್ಟಿನ್ ಅವರ ನೇತೃತ್ವದಲ್ಲಿ ಚರ್ಚ್
ಮ್ಯೂಸಿಕ್ ಕಲಿಕೆಗೆಂದು ‘ಸೇಂಟ್ ಮಾರ್ಕ್ಸ್ ಮ್ಯೂಸಿಕ್
ಅಕಾಡೆಮಿ’ ಆರಂಭವಾಯಿತು. ಇದು ಲಂಡನ್ನ ‘ರಾಯಲ್
ಸ್ಕೂಲ್ ಆಫ್ ಚರ್ಚ್ ಮ್ಯೂಸಿಕ್’ನಿಂದ ಪ್ರಮಾಣೀಕೃತಗೊಂಡಿದೆ. ಇದರ
ಜೊತೆಗೆ ಸರ್ಟಿಫಿಕೇಟ್ ಕೋರ್ಸ್ಗಳನ್ನು ಕೂಡ ನಡೆಸುತ್ತಿದೆ. ಯುಕೆ
ಎಬಿಆರ್ಎಸ್ಎಂ, ಟ್ರಿನಿಟಿ ಗೈಡ್ಹಾಲ್, ಎಲ್ಎಸ್ಎಂ, ಎಸ್ಎಂಎಂಎ ಸರ್ಟಿಫಿಕೇಟ್ ಕೋರ್ಸುಗಳಿಗೆ ಹಾಜರಾಗಬಹುದು. ಆದರೆ ಇದು ಕಡ್ಡಾಯವಲ್ಲ.
ಅದು ಅವರವರ ಆಯ್ಕೆಯಾಗಿದೆ. ವಾರಕ್ಕೆ
ಒಂದು ಗಂಟೆಯ ತರಗತಿ ಇರುತ್ತದೆ.
ತಿಂಗಳಿಗೆ ನಾಲ್ಕು ಕ್ಲಾಸುಗಳು. ಇದರಲ್ಲಿ
ಶೇ 75ರಷ್ಟು ಹಾಜರಾತಿ ಕಡ್ಡಾಯ.
.– ಫಾದರ್ ಎಸ್.ಕೆ. ದಾಸ್,
ಸೇಂಟ್ ಮಾರ್ಕ್ ಮ್ಯೂಸಿಕ್ ಅಕಾಡೆಮಿ
ನಿರ್ದೇಶಕ(ಮಾಹಿತಿಗೆ: 080 2221 4021, 98455
59658)
ಶುಕ್ರವಾರ, ಜುಲೈ 26, 2013
ಧಾರವಾಡದ ಪುರಾತನ ಬಾಸೆಲ್ ಮಿಷನ್ ಚರ್ಚ್ (1844-45).
ಪುರಾತನ
ಚರ್ಚ್ಗಳಲ್ಲಿ ಒಂದಾದ ಬಾಸೆಲ್
ಮಿಷನ್ ಚರ್ಚ್ ಧಾರವಾಡದ ರೈಲ್ವೆ
ನಿಲ್ದಾಣಕ್ಕೆ ಹೋಗುವ ಮಾರ್ಗದಲ್ಲಿದ್ದು
ನೋಡಲೇ ಬೇಕಾದ ತಾಣ. ಪುರಾತನ
ಚರ್ಚ್ಗಳಲ್ಲಿ ಒಂದಾದ ಬಾಸೆಲ್ ಮಿಷನ್
ಚರ್ಚ್ ಧಾರವಾಡದ ರೈಲ್ವೆ ನಿಲ್ದಾಣಕ್ಕೆ
ಹೋಗುವ ಮಾರ್ಗದಲ್ಲಿ ಬಾಸೆಲ್ ಮಿಷನ್ ಆವರಣಕ್ಕೆ
ಹೊಂದಿಕೊಂಡಂತೆ ಇದೆ. ಬಾಸೆಲ್ ಮಿಷನರಿ
ಸೊಸೈಟಿ 1844-45ರಲ್ಲಿ ಈ ಚರ್ಚ್
ನಿರ್ಮಿಸಿತ್ತು. ಸುಮಾರು 76 ಅಡಿ ಉದ್ದ , 42 ಅಡಿ
ಅಗಲ ಹಾಗೂ ಕೋನಾಕಾರದ 24 ಅಡಿ
ಎತ್ತರವಾಗಿ ಈ ಚರ್ಚ್ ಮನಮೋಹಕವಾಗಿ
ಕಂಗೊಳಿಸುತ್ತಿದೆಯಲ್ಲದೆ, ಕ್ರಿಶ್ಚಿಯನ್ನರ ಸಾಕ್ಷಿ ಕೇಂದ್ರವಾಗಿದೆ. ಅದೇ
ರೀತಿ ಧಾರವಾಡ-ಹಳಿಯಾಳ ರಸ್ತೆಯಲ್ಲಿ
ಬರುವ "ಆಲ್ ಸೇಂಟ್ಸ್ ಚರ್ಚ್'
ಹಳೆಯ ಚರ್ಚ್ಗಳಲ್ಲಿ ಒಂದಾಗಿದೆ. 1888ರಲ್ಲಿ ಸುಮಾರು ಎರಡು
ಎಕರೆ ಪ್ರದೇಶಗಳಲ್ಲಿ ಈ ಚರ್ಚ್ನ್ನು ನಿರ್ಮಿಸಲಾಗಿದೆ.
ಸೋಮವಾರ, ಜುಲೈ 22, 2013
ಮೋದಿ ಪ್ರಧಾನಿಯಾಗುವುದು ಸೇನ್ಗೆ!(ನೋಬೆಲ್ ಪ್ರಶಸ್ತಿ ವಿಜೇತ) ಬೇಕಾಗಿಲ್ವಂತೆ. ಅವರು ದೇಶದ ಅಲ್ಪಸಂಖ್ಯಾತರ ಸುಭದ್ರತೆಗಾಗಿ ಹೆಚ್ಚಿಗೆ ಏನನ್ನೂ ಮಾಡಿಲ್ಲ".
ಮೋದಿ ಪ್ರಧಾನಿಯಾಗುವುದು ಸೇನ್ಗೆ ಬೇಕಾಗಿಲ್ವಂತೆ! ಗುಜರಾತ್ ಮುಖ್ಯಮಂತ್ರಿ ಮತ್ತು ಬಿಜೆಪಿಯ ಚುನಾವಣಾ ಸಮಿತಿಯ ಅಧ್ಯಕ್ಷ ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗುವುದನ್ನು ತಾವು ಬಯಸುವುದಿಲ್ಲ ಎಂದು ನೋಬೆಲ್ ಪ್ರಶಸ್ತಿ ವಿಜೇತ ಖ್ಯಾತ ಅರ್ಥಶಾಸ್ತ್ರಜ್ಞ ಅಮಾರ್ತ್ಯ ಸೇನ್ ಅವರು ಸ್ಪಷ್ಟ ನುಡಿಗಳಲ್ಲಿ ಹೇಳಿದ್ದಾರೆ.ಸೋಮವಾರ ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ, "ಒಬ್ಬ ಭಾರತೀಯನಾಗಿ ನನಗೆ ನರೇಂದ್ರ ಮೋದಿ ಭಾರತದ ಪ್ರಧಾನಿಯಾಗುವುದು ಬೇಕಾಗಿಲ್ಲ. ಅವರು ದೇಶದ ಅಲ್ಪಸಂಖ್ಯಾತರ ಸುಭದ್ರತೆಗಾಗಿ ಹೆಚ್ಚಿಗೆ ಏನನ್ನೂ ಮಾಡಿಲ್ಲ" ಎಂದು ಅಮಾರ್ತ್ಯ ಸೇನ್ ನುಡಿದಿದ್ದಾರೆ."ಅಲ್ಪಸಂಖ್ಯಾತರ ಭದ್ರತೆಗೆ ಸಂಬಂಧಿಸಿದಂತೆ ಮೋದಿ ಅವರ ರೆಕಾರ್ಡ್ ಅಷ್ಟು ಚೆನ್ನಾಗಿಲ್ಲ. ಅಲ್ಪಸಂಖ್ಯಾತರು ಮತ್ತೆ ದೇಶದಲ್ಲಿ ಅಭದ್ರತೆ ಅನುಭವಿಸುವುದು ಬೇಕಾಗಿಲ್ಲ .
ಮಂಗಳವಾರ, ಏಪ್ರಿಲ್ 9, 2013
ಭಾನುವಾರ, ಮಾರ್ಚ್ 17, 2013
ರೋಮನ್ ಕ್ಯಾಥೋಲಿಕ್ ಕ್ರೈಸ್ತರ ಧರ್ಮಗುರು ಪೋಪ್ .
ರೋಮನ್ ಕ್ಯಾಥೋಲಿಕ್
ಕ್ರೈಸ್ತರ ಧರ್ಮಗುರು ಪೋಪ್ ಬೆನೆಡಿಕ್ಟ್ XVI ಅವರ ಉತ್ತರಾಧಿಕಾರಿಯಾಗಿ ಅರ್ಜೆಂಟಿನಾದ ಜಾರ್ಗ್ ಮಾರಿಯೊ
ಬೆರ್ಗೋಗ್ಲಿಯೋ ಮಾರಿಯೊ
ಬೆರ್ಗೋಗ್ಲಿಯೋ (76) ಅವರು ಆಯ್ಕೆಯಾಗಿದ್ದಾರೆ. ವ್ಯಾಟಿಕನ್
ಕ್ರೈಸ್ತರು ಮತ್ತು ವಿಶ್ವದಾದ್ಯಂತ ಇರುವ
ರೋಮನ್ ಕ್ಯಾಥೋಲಿಕ್ ಕ್ರೈಸ್ತ ಧರ್ಮೀಯರು 266ನೇ
ಧರ್ಮಗುರುವನ್ನು ಸ್ವಾಗತಿಸಿದ್ದಾರೆ.13ನೇ ಶತಮಾನದಲ್ಲಿ ಬಡತನದಲ್ಲಿಯೇ
ಬದುಕಿದ ಇಟಲಿಯ ಧರ್ಮಗುರು ಫ್ರಾನ್ಸಿಸ್
ಅವರ ಹೆಸರನ್ನು ಜಾರ್ಗ್ ಅವರು ಇಟ್ಟುಕೊಂಡಿದ್ದಾರೆ.
ಪೋಪ್ ಫ್ರಾನ್ಸಿಸ್ ಅವರು ಮೊದಲ ಅಮೆರಿಕನ್
ರೋಮನ್ ಕ್ಯಾಥೋಲಿಕ್ ಧರ್ಮಗುರುವಾಗಿದ್ರು,
ಒಂದು ಶತಮಾನದ ಇತಿಹಾಸ ಗಮನಿಸಿದರೆ
ಯುರೋಪ್ನಿಂದ ಹೊರಗಿರುವ ಮೊದಲ
ಧರ್ಮಗುರು. ಸಲಿಂಗಿಗಳ ಮದುವೆ, ಗರ್ಭಪಾತ ಮತ್ತು
ಗರ್ಭನಿರೋಧಕ ಬಳಕೆಯನ್ನು ವಿರೋಧಿಸುವುದಾಗಿ ಪೋಪ್ ಫ್ರಾನ್ಸಿಸ್ ಹೇಳಿದ್ದಾರೆ.
ಸಲಿಂಗಿಗಳ ಮದುವೆ ದೈವೇಚ್ಛೆಯ ಮೇಲೆ
ನಡೆಸುವ ವಿಧ್ವಂಸಕ ಕೃತ್ಯ ಎಂದು ಅವರು
ಹೇಳಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)